Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೇಷ:
ಈ ವಾರವು ಆದಿತ್ಯವಾರದ ಅಮಾವಾಸ್ಯೆ ಬಂದು ಆದಿತ್ಯನು ಬುಧನ ಮನೆಯಲ್ಲಿ ಸೇರಿದ್ದಾನೆ. ರವಿ-ಬುಧರು ಪರಸ್ಪರ ಮಿತ್ರರು. ಇಬ್ಬರೂ ಕೂಡಿ ಬುಧಾದಿತ್ಯ ಯೋಗ ಬರುತ್ತದೆ. ಲಗ್ನದಲ್ಲಿ ರಾಹು, ದ್ವಾದಶ ಗುರುವು ಮುಂದಿನ ನಿದ್ದೆಯನ್ನು ಹಾಳುಮಾಡಿ ಸುಖವನ್ನು ನೀಡದೆ ಇದ್ದರೂ, ತಾಳ್ಮೆಯಿಂದ ವ್ಯವಹರಿಸಿ. ಗುರುಬಲ ಇಲ್ಲದಿದ್ದರೆ ದೈವವನ್ನೂ ಪೂಜಿಸಿದರೆ ಜೀವನವು ಸಾಧಾರಣವಾಗಿ ನಡೆಯುತ್ತದೆ. ಗುರುವಿಗಾಗಿ ನರಸಿಂಹದೇವರನ್ನು, ರಾಹುವಿಗೆ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.

Ad Widget . Ad Widget . Ad Widget .

ವೃಷಭ:
ಲಗ್ನಾಧಿಪತಿ ಪಂಚಮದಲ್ಲಿ ಇದ್ದು, ಬುಧನ ಜೊತೆ ಇರುವುದರಿಂದ ಎಲ್ಲವನ್ನೂ ಜಯಿಸಿ ಸಾಗುತ್ತಿದ್ದೀರ. ಗುರುಗಣ ಪೂಜಿಸಿ. ವಿಘ್ನಗಳು ದೂರವಾಗಿ ಎಟುಕುವ ಕೆಲಸ ಮಾಡಿದರೆ ತೃಪ್ತಿಯೂ, ಸಂತೋಷವೂ ಮುಂದುವರಿಯುತ್ತದೆ. ಏಕಾದಶದಲ್ಲಿ ಗುರುವಿದ್ದಾನೆ.

ಮಿಥುನ:
ಈ ವಾರವು ಚಂದ್ರನು ಉತ್ತರಾ ನಕ್ಷತ್ರದಿಂದ ಹಿಡಿದು ಮೂಲಾನಕ್ಷತ್ರದವರೆಗೂ ಆಯಾ ರಾಶಿಗೆ ಅನ್ವಯವಾಗುವಂತೆ ಫಲವನ್ನು ನೀಡುತ್ತಾನೆ. ವ್ಯಾಸರನ್ನು ವಸಿಷ್ಠರನ್ನು ಅರ್ಚಿಸಿದರೆ ತ್ವರಿತವಾಗಿ ಕೆಲಸವಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ನಿಮ್ಮನ್ನು ದೈವವೇ ಕಾಪಾಡುತ್ತದೆ.

ಕಟಕ:
ಸ್ವಕ್ಷೇತ್ರದ ಗುರುವು 9ರಲ್ಲಿದ್ದು ನಿಮಗೆ ಶ್ರೀರಕ್ಷೆ ನೀಡಿ ನಿಮ್ಮನ್ನು ಮುನ್ನಡೆಸುತ್ತಿದ್ದಾನೆ. ಏಳರ ಶನಿಯು ಶಾರೀರವನ್ನು ಬೇಗ ಬಳಲುವಂತೆ ಮಾಡಿ ಮುಖದಲ್ಲಿ ಆಯಾಸ ಕಂಡು ಉತ್ಸಾಹ, ಸಂತೋಷವು ಮಂದವಾಗಿರುತ್ತದೆ. ಕೈಲಾದ ಭಾರ ಹೊತ್ತರೆ ನಡೆಯಬಹುದು. ಇಲ್ಲದಿದ್ದರೆ ಕುಸಿದು ಬೀಳಬಹುದು. ಹುಷಾರಾಗಿ ಹೆಜ್ಜೆಯನ್ನು ಹಾಕಿ. ಹೆಚ್ಚಾಗಿ ದೇಹಾಲಸ್ಯ ಮಾಡದೆ ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ರಾಮಾಯಣದ ಬಾಲಕಾಂಡವನ್ನು ಪಾರಾಯಣ ಮಾಡಿ.

ಸಿಂಹ:
ಷಷ್ಠದಲ್ಲಿರುವ ಶನಿಯು ಲಾಭವನ್ನು ಕೊಟ್ಟರೂ ಅದಕ್ಕೆ ತಕ್ಕನಾದ ಖರ್ಚನ್ನು ಕೇಳುತ್ತಾನೆ. ಅಷ್ಟಮ ಗುರುವು ನಿಮ್ಮ ಮೇಲೆ ದುರ್ಬುದ್ಧಿಯವರು ಹಾಯುವಂತೆ ಮಾಡುತ್ತಾನೆ. ಎಲ್ಲಕ್ಕೂ ಮೌನವೇ ಉತ್ತರವಾಗಿರಲಿ. ಕ್ಷಮೆ, ದಯೆ, ಇರಲಿ. ನಿಮ್ಮ ಕಾಲಕ್ಕಾಗಿ ಕಾಯಿರಿ. ಸೂರ್ಯಾರ್ಚನೆ ಮಾಡಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.

ಕನ್ಯಾ:
ಕನ್ಯಾ ರಾಶಿಯ ಅಧಿಪತಿ ಬುಧನು ಸ್ವಕ್ಷೇತ್ರದಲ್ಲೇ ಇದ್ದು, ಶುಕ್ರನೂ ಅಲ್ಲಿಯೇ ಇದ್ದಾನೆ. ಗುರುವು ಸಪ್ತಮದಲ್ಲಿ ಇದ್ದು ಒಳ್ಳೆಯ ಫಲವನ್ನು ನೀಡುತ್ತಾನೆ. ಆದರೆ, ಪಂಚಮ ಶನಿಯು ಬಿಡುವ ಕಾಲ. ಒಂದಲ್ಲಾ ಒಂದು ಸಮಸ್ಯೆಯು ಮಾನಸಿಕವಾಗಿ ಖಿನ್ನತೆಯು ನಿಮ್ಮನ್ನು ಅಭದ್ರ ಸ್ಥಿತಿಗೆ ತಂದೊಡ್ಡುತ್ತದೆ. ಹೆದರುವ ಅಗತ್ಯವಿಲ್ಲ. ಸಪ್ತಮ ಗುರುವು ಕಾಯುತ್ತಾನೆ. ದ್ವಿತೀಯ ಕೇತುವಿಗೆ ಗಣಪತಿ ಅಷ್ಟೋತ್ತರ, ವರದರಾಜ ಸ್ತೋತ್ರವನ್ನು ಪಠಿಸಿ.

ತುಲಾ:
ರಾಶ್ಯಾಧಿಪತಿ ಶುಕ್ರನು ತುಲಾ ರಾಶಿಗೆ 12ಕ್ಕೆ ಬಂದು ಬುಧನೂ ಅಲ್ಲೇ ನೆಲೆಸಿದ್ದಾನೆ. ನಿಮ್ಮನ್ನು ನೀವೇ ಕಾಪಾಡಿಕೊಳ್ಳಬೇಕೇ ಹೊರತು ಅನ್ಯರು ನಿಮಗೆ ಸಹಾಯ ಮಾಡಲು ಬರುವುದಿಲ್ಲ. ಆದರೆ ಗುರು, 4ರ ಶನಿ ಅಲ್ಲೇ ಇದ್ದರೂ ವ್ಯಾಪಾರ ಮಾಡುವವರು ಸ್ವಂತ ಉದ್ಯೋಗ ಮಾಡುವವರಿಗೆ ಪ್ರಗತಿಯೂ ಸಿಕ್ಕು ಸಂತೋಷ ಉಂಟಾಗುತ್ತದೆ. ಮರೆಯದೆ 9ರ ದಿನಗಳ ಪರ್ಯಂತ ದುರ್ಗಾಪೂಜೆಯನ್ನು ಮಾಡಿರಿ. ದುರ್ಗಾ ಅಷ್ಟೋತ್ತರ ಪಾರಾಯಣ ಮಾಡಿರಿ. ಎಲ್ಲವನ್ನೂ ಗೆದ್ದು ಸುಖವನ್ನು ಪಡೆಯಬಹುದು.

ವೃಶ್ಚಿಕ:
ನೀವು ನಿಮ್ಮ ಕರ್ತವ್ಯದ ಹಾಜರಾತಿ ಪುಸ್ತಕ ತೆಗೆದು ನೋಡಿದರೆ ಹಿಂದೆ ದೇವರು ಏನು ಕೊಟ್ಟಿದ್ದ ಈಗ ಹೇಗೆ ನಡೆಸಿದ್ದಾನೆಂದು ತಿಳಿಯಿರಿ. 12ರ ಕೇತು ನುಡಿಯನ್ನು ಶುದ್ಧವಾಗಿ ಇಟ್ಟುಕೊಳ್ಳಿ. ನಡಿಗೆಯನ್ನು ಗಜರಾಜನ ಗಾಂಭೀರ್ಯದಂತೆ ಅಳವಡಿಸಿಕೊಂಡರೆ ಅಸಾಧ್ಯ ಕೆಲಸವೂ ಆಗಿ ಧನವೂ ಸುಖವೂ ನಿಮ್ಮ ಕೈಗೂಡುತ್ತದೆ. ಗಕಾರ ಗಣಪತಿ ಸಹಸ್ರನಾಮವನ್ನು ಪಠಣ ಮಾಡಿದರೆ ಹೆಚ್ಚಿನ ಫಲ ಕಂಡುಕೊಳ್ಳಬಹುದು.

ಧನಸ್ಸು:
ಪೂ.ಷಾ., ಮೂಲ, ಉ.ಷಾ-1 ಪಾದ ಜನಿಸಿದವರು ಧನುರ್ ರಾಶಿಯ ಅಧಿಪತಿಯಾದ ಗುರುವಿನ ಅಧೀನಕ್ಕೆ ಒಳಪಟ್ಟಿರುತ್ತಾರೆ. ಆದ್ದರಿಂದ ಎಲ್ಲ ವಿಚಾರವೂ ನಿಮ್ಮಂತೆ ಆಗುವುದೆಂಬ ಹಂಬಲ ಬಿಟ್ಟು ಯೋಚಿಸಿ. ಎಚ್ಚರದಿಂದ ದಾಟಬೇಕೆ ಹೊರತು ಹಳ್ಳ-ಕೊಳ್ಳದಲ್ಲಿ ಬಿದ್ದರೆ ಯಾರೂ ಕೈಹಿಡಿಯುವುದಿಲ್ಲ. ಶನಿಯು ಇನ್ನೇನು ಬಿಡುವ ಕಾಲ. ವಿಚಾರಗಳನ್ನು ಮೇಮೇಲೆ ಎಳೆದುಕೊಳ್ಳಬೇಡಿ. ಆನಂದವನ್ನು ಕಂಡುಕೊಳ್ಳಬೇಕೇ ಹೊರತು ಕತ್ತಲಲ್ಲಿ ನಡೆಯಬಾರದೆಂದು ನಿಮ್ಮ ಬುದ್ಧಿಗೆ ಬರಬೇಕು. ನಿಮ್ಮ ತಂದೆ-ತಾಯಿಯನ್ನೇ ದೇವರೆಂದು ಪೂಜಿಸಿ.

ಮಕರ:
ಇದುವರೆಗೆ ಕಾಡಿದ್ದ ಶನೈಶ್ಚರನು ಬಿಡುವ ವೇಳೆ ಕಷ್ಟ-ಕಾರ್ಪಣ್ಯ ಕೊಟ್ಟರೂ ಅದನ್ನು ಸಹಿಸಿಕೊಂಡಲ್ಲಿ ಜೀವನವನ್ನು ಗೆಲ್ಲಬಹುದು. ಜಗತ್ತನ್ನು ನಡೆಸುವ ಜಗನ್ನಾಥನಿಗೆ ಅವನೇ ಸೃಷ್ಟಿಸಿರುವ ಪ್ರಜೆಗಳಿಗೆ ಅನುಗ್ರಹಿಸಿ, ಸಿಹಿ-ಕಹಿಯ ಮಿಶ್ರಣ ಮಾಡಿ ಕಳಿಸಿರುತ್ತಾನೆ. ಧೈರ್ಯದಿಂದ ಇದ್ದು, ಜನ್ಮ ಶನಿಯಿಂದ ದಾಟಿ ಕಡೆಯ ಭಾಗದ ಶನಿಯ ಸಂಚಾರಕ್ಕೆ ಸಿದ್ಧರಾಗಿ. ಒಳ್ಳೆಯ ಫಲಗಳೇ ನಡೆಯುತ್ತದೆ. ಶನಿಯನ್ನು ಪೂಜಿಸಿ ಬೇಕಾದ್ದನ್ನು ಪಡೆಯಬಹುದು.

ಕುಂಭ:
ಈ ರಾಶಿಯವರ ದ್ವಾದಶದಲ್ಲಿ ಶನಿಯಿದ್ದು, ಹೆಚ್ಚಿನ ಕಾಳಜಿ ವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ದ್ವಿತೀಯ ಗುರು ಅನುಗ್ರಹವು ಇದ್ದು ತಕ್ಕಮಟ್ಟಿಗೆ ಸಾಧನೆಯನ್ನು ಮಾಡಿ. ದೇವರು ಕೊಟ್ಟ ವರವನ್ನು ಸಂತೋಷದಿಂದ ಸ್ವೀಕರಿಸಿ. ವಿನಾಯಕನನ್ನು ಪೂಜಿಸಿ. ಪ್ರಾರ್ಥಿಸಿ. ಕೆಲಸವು ಈಡೇರುವುದು. ಮನಸ್ಸಿಗೆ ಧೈರ್ಯವನ್ನೂ ಕೊಟ್ಟು ವಿಘ್ನವನ್ನು ಹರಸಿ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತಾನೆ.

ಮೀನ:
11ರಶನಿಯ ದೆಸೆಯಿಂದ ನಿಮಗೆ ಲಾಭವೇ ಆಗಿದೆ. ಆದರೆ ಅದನ್ನು ಯಾವ ರೀತಿ ಉಪಯೋಗಿಸಿಕೊಂಡಿರೆಂದು ಮುಖ್ಯವಾಗುತ್ತದೆ. ಗುರುವಿನ ಭಾಗ್ಯವನ್ನು, ಶನಿಯ ಏಕಾದಶ ಫಲವನ್ನು ಸ್ವೀಕರಿಸಿ ಆತ್ಮಸಂತೋಷ ಅನುಭವಿಸಿ. ದೇವರು ಕೊಟ್ಟ ವರವನ್ನು ಹಂಚಿ ತಿಂದರೆ ದೈವವೇ ಹರಸುತ್ತದೆ. ಅಮರೇಶ್ವರನ ಪ್ರಾರ್ಥನೆ ಇರಲಿ. ಪ್ರತಿನಿತ್ಯ ಗುರುಚರಿತ್ರೆಯ ಪಾರಾಯಣವಿರಲಿ.

Leave a Comment

Your email address will not be published. Required fields are marked *