ಇಂದು ಪಿತೃಪಕ್ಷದ ಮಹಾಲಯ ಅಮಾವಾಸ್ಯೆ; ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡದಲ್ಲಿ ಸಾವಿರಾರು ಮಂದಿ

ಸಮಗ್ರ ನ್ಯೂಸ್: ಇಂದು ಪಿತೃಪಕ್ಷದ ಮಹಾಲಯ ಅಮಾವಾಸ್ಯೆ ಹಿನ್ನೆಲೆ ರಾಜ್ಯದ ವಿವಿಧ ಮೂಲಗಳಿಂದ ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡಕ್ಕೆ ಆಗಮಿಸಿದ ಸಾವಿರಾರು ಮಂದಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾರೆ.

Ad Widget ... ..

ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಆಸ್ತಿಕರ ಜನ ಜಾತ್ರೆ ನಡೆಯುತ್ತದೆ. ಈ ಹಿನ್ನೆಲೆ ಕಾವೇರಿ ನದಿ ತಟದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ತಮ್ಮ ಕುಟುಂಬದ ಹಿರಿಯರಿಗೆ ಪಶ್ಚಿಮವಾಹಿನಿ, ಸ್ನಾನಘಟ್ಟ, ಗೋಸಾಯಿಘಾಟ್ ಹಾಗೂ ಸಂಗಮದಲ್ಲಿ ಪಿಂಡ ತರ್ಪಣ ಮಾಡಲಾಗುತ್ತಿದೆ.

Ad Widget


ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡಕ್ಕೆ ಆಗಮಿಸಿದ ಸಾವಿರಾರು ಮಂದಿ ಪಿತೃಪಕ್ಷದಲ್ಲಿ ತಿಲತರ್ಪಣ ಅರ್ಪಿಸುವುದರಿಂದ ಪೂರ್ವಜನರ ಆತ್ಮಕ್ಕೆ ಶಾಂತಿ ಮತ್ತು ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.

Leave a Comment

Your email address will not be published. Required fields are marked *