Ad Widget .

ಈ ಬಾರಿ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್‌ ಆಗಮಿಸುವುದಿಲ್ಲ:ಸಚಿವ ಸೋಮಶೇಖರ್‌

ಸಮಗ್ರ ನ್ಯೂಸ್: ಈ ಬಾರಿ ಯುವ ದಸರಾಗೆ ವಿಶೇಷ ಅತಿಥಿಯಾಗಿ ನಟ ಸುದೀಪ್ ಆಗಮಿ ಸುತ್ತಿಲ್ಲ. ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಸಚಿವ ಸೋಮಶೇಖರ್‌ ತಿಳಿಸಿದ್ದಾರೆ.

Ad Widget . Ad Widget .

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ದಸರಾ ಕಾರ್ಯಕ್ರಮದಲ್ಲಿ ಸುದೀಪ್‌ ಪಾಲ್ಗೊಳ್ಳದ ಹಿನ್ನೆಲೆ ಬೇರೊಬ್ಬರನ್ನು ಆಹ್ವಾನಿಸ ಲಾಗುತ್ತದೆ’ ಎಂದು ತಿಳಿಸಿದರು. ಇನ್ನು ದಸರಾ ಸಿದ್ಧತೆ ಕಾರ್ಯಕ್ರಮಗಳಲ್ಲಿ ಶಾಸಕ ರಾಮದಾಸ್ ಪಾಲ್ಗೊಳ್ಳುತ್ತಿಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಅವರು ಮೋದಿ ಯುಗ ಉತ್ಸವ ಮಾಡುತ್ತಿದ್ದಾರೆ. ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ’ ಎಂದರು. ದಸರೆಗೆ ಪ್ರಚಾರದ ಕೊರತೆ ಆಗಿಲ್ಲ. ಏನಾದರೂ ಸಮಸ್ಯೆ ಇದ್ದರೆ ಪರಿಹರಿಸಲಾಗುವುದು. ಪ್ರಚಾರ ಸಮಿತಿ ರಚಿಸಿದ್ದು, ಎಲ್ಲ ರೀತಿಯಲ್ಲೂ ಕೆಲಸ ನಡೆಯುತ್ತಿದೆ’ ಎಂದು ತಿಳಿಸಿದರು.

Ad Widget . Ad Widget .

ಇನ್ನೂ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡಲಿದ್ದಾರೆ. ವೇದಿಕೆಯಲ್ಲಿ 13 ಆಸನಗಳಿರಲಿವೆ. ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿ, ಆರು ಮಂದಿ ಕೇಂದ್ರ ಸಚಿವರು, ರಾಜ್ಯದ ನಾಲ್ವರು ಸಚಿವರು ವೇದಿಕೆಯಲ್ಲಿ ಇರಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

Leave a Comment

Your email address will not be published. Required fields are marked *