Ad Widget .

ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ
ಬಲವಂತವಾಗಿ ಮತಾಂತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳಿ: ಅಂಬೇಡ್ಕರ್ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದವ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಲಾಯಿತು.

Ad Widget . Ad Widget .

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಎಂಬವರು ಮತಾಂತರಕ್ಕೆ ಒಳಗಾಗಿರುವವರು. ಇವರನ್ನು ಬಲವಂತವಾಗಿ ಮಸೀದಿಯಲ್ಲಿ ಬಂಧಿಸಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಲಾಗಿತ್ತು. ಹಾಗಾಗಿ ಮತಾಂತರ ಮಾಡಿದ 11 ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಲಿಸ್ ಇಲಾಖೆಯವರಿಗೆ ಅಂಬೇಡ್ಕರ್ ರಕ್ಷಕ ವೇದಿಕೆ ವತಿಯಿಂದ ಕೇಳಿಕೊಳ್ಳುತ್ತಿದ್ದೇವೆ.

Ad Widget . Ad Widget .

ಹಾಗೆ ದಲಿತರನ್ನು ಬಲವಂತವಾಗಿ ಮಸೀದಿಯಲ್ಲಿ ಬಂಧಿಸಿ ಮುಸ್ಲಿಮರು ಈ ಹುಡುಗನನ್ನು ಮತಾಂತರ ಮಾಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಯಾರನ್ನು ಕೂಡ ಅವರಿಗೆ ಇಚ್ಛೆ ಇಲ್ಲದೆ ಮುಸ್ಲಿಂ ಧರ್ಮಕ್ಕೆ ಸೇರಿಸಬಾರದು ಎಂದು ಕುರಾನ್ ಹೇಳುತ್ತದೆ. ಆದರೆ ಇವತ್ತು ಒಬ್ಬ ದಲಿತ ನನ್ನು ಮಸೀದಿಯಲ್ಲಿ ಬಂಧನ ಮಾಡಿ ಅವನನ್ನು ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಿದ್ದಾರೆ.

ಈ ಮತಾಂತರದಲ್ಲಿ ಭಾಗಿಯಾಗಿರುವಂತ 11 ಜನರಿಗೆ ಕಠಿಣ ಶಿಕ್ಷೆ ಆಗಬೇಕು ಇಲ್ಲದಿದ್ದರೆ ಇನ್ನು ಮುಂದೆ ಕೂಡ ಇದೇ ರೀತಿ ಆಗಬಹುದೆಂದು ಪೊಲೀಸ್ ಇಲಾಖೆಯವರಿಗೆ ಕೇಳಿಕೊಳ್ಳುತ್ತಿದ್ದೇವೆ. ಒಂದು ವೇಳೆ ಕಠಿಣ ಶಿಕ್ಷೆಯಾಗದಿದ್ದಲ್ಲಿ ಯಾರೆಲ್ಲ ಮುಸ್ಲಿಮರು ದಲಿತರನ್ನು ಮತಾಂತರ ಮಾಡಲು ಮುಂದಾಗುತ್ತಾರೊ ಅವರಿಗೆ ಅಂಬೇಡ್ಕರ್ ರಕ್ಷಣೆ ವೇದಿಕೆಯ ವತಿಯಿಂದ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರು ಪಿಸುಂದರಪಾಟಾಜೆಯವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *