ಅಮವಾಸ್ಯೆಯಂದೇ ಮಾಂತ್ರಿಕೆಯ ಮನೆ ಮೇಲೆ ದಾಳಿ| ಪೊಲೀಸರ ಮುಂದೆ ಮಹಿಳಾ ಮಾಂತ್ರಿಕೆಯ ಹೈಡ್ರಾಮಾ

ಸಮಗ್ರ ನ್ಯೂಸ್: ದೇವರ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ‌ ಮಹಿಳಾ ಮಾಂತ್ರಿಕೆಯ ಮನೆ ಮೇಲೆ ಅಮವಾಸ್ಯೆಯಂದೇ ಪೊಲೀಸ್ ದಾಳಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಡೆದಿದೆ.

Ad Widget ... ..

ಜೀಲಾನಿ ಅಬ್ದುಲ್ ವುಲ್ಲಾ ಪ್ರಕರಣದ ಆರೋಪಿ. ಈಕೆ ಮಾಟ ಮಂತ್ರ ಮಾಡುತ್ತೇನೆ ಎಂದು ನೂರಾರು ಜನರಿಗೆ ನಂಬಿಸಿ ಹಣ ಪೀಕುತಿದ್ದಳು. ಅಲ್ಲದೆ ದೇವರ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ‌ಳು.

Ad Widget

ಹೀಗಾಗಿ ಮಹಿಳೆಯ ಮೈದುನ ಶಮೀರ್ ಅಬ್ದುಲ್ ವುಲ್ಲಾರಿಂದ ದೂರು ದಾಖಲಾಗಿತ್ತು. ದೂರು ಹಿನ್ನೆಲೆ ಮತ್ತು ಸಾರ್ವಜನಿಕರ ಕರೆ ಮಾಡಿದ ಖಚಿತ ಮಾಹಿತಿ ಮೇರೆಗೆ 112 ಪೋಲಿಸರಿಂದ ದಾಳಿ ನಡೆಲಾಯಿತು. ಈ ವೇಳೆ ಮಹಿಳೆಯ ಮನೆಯಲ್ಲಿ ಮಾಟ ಮಂತ್ರಕ್ಕೆ ಬಳಕೆ ಮಾಡುತ್ತಿದ್ದ ವಸ್ತುಗಳು ಪತ್ತೆಯಾಗಿತ್ತು. ಈ ವೇಳೆ ಪೋಲಿಸರ ಮುಂದೆ ಮಹಿಳಾ ಮಾಂತ್ರಿಕೆ ಹೈಡ್ರಾಮಾ ಮಾಡಿದ್ದಾಳೆ.

ಆದರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *