ಸಮಗ್ರ ನ್ಯೂಸ್: ವಿದ್ಯುತ್ ಖರೀದಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ. ಈ ಮೂಲಕ ರಾಜ್ಯದ ಜನರಿಗೆ ದರ ಏರಿಕೆಯ ಶಾಕ್ ನೀಡಲು ನಿಗಮಗಳು ತಯಾರಿ ನಡೆಸಿವೆ.
ಆರು ತಿಂಗಳ ಕಾಲ ಯೂನಿಟ್ ವಿದ್ಯುತ್ ಗೆ 43 ಪೈಸೆವರೆಗೆ ಹೆಚ್ಚು ಹಣ ಪಾವತಿಸಬೇಕಿದೆ. ಇಂಧನ ಹೊಂದಾಣಿಕೆ ವೆಚ್ಚದ ರೂಪದಲ್ಲಿ ವಿದ್ಯುತ್ ಖರೀದಿ ದರದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ.
ಕಳೆದ ಏಪ್ರಿಲ್ ತಿಂಗಳಲ್ಲಿ 35 ಪೈಸೆಯಷ್ಟು ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಇಂಧನ ಹೊಂದಾಣಿಕೆ ವೆಚ್ಚ ಹೆಸರಲ್ಲಿ ಮತ್ತೆ ದರ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್ ಗೆ 24 ಪೈಸೆಯಿಂದ 43 ಪೈಸೆವರೆಗೆ ವಿದ್ಯುತ್ ದರ ಹೆಚ್ಚಳಕ್ಕೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶಿಸಿದೆ.
ಬೆಸ್ಕಾಂ ಗ್ರಾಹಕರಿಗೆ ಯೂನಿಟ್ ಗೆ 43 ಪೈಸೆ, ಮೆಸ್ಕಾಂ(ಮಂಗಳೂರು) ಗ್ರಾಹಕರಿಗೆ 24 ಪೈಸೆ. ಚಾಮುಂಡೇಶ್ವರಿ ಮೈಸೂರು(ಚೆಸ್ಕಾಂ) ಗ್ರಾಹಕರಿಗೆ 34 ಪೈಸೆ ಹುಬ್ಬಳ್ಳಿ(ಹೆಸ್ಕಾಂ) ಗ್ರಾಹಕರಿಗೆ 35 ಪೈಸೆ, ಕಲಬುರ್ಗಿ(ಜೆಸ್ಕಾಂ) ಗ್ರಾಹಕರಿಗೆ 35 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳವಾಗಿದೆ.