ಕರಾವಳಿಗೆ ಕಾಲಿಟ್ಟ ಪೋಸ್ಟರ್ ಅಭಿಯಾನ| ಬೆಳ್ತಂಗಡಿ ಶಾಸಕರಿಗೆ ತಟ್ಟಿದ ‘PAY MLA’ ಬಿಸಿ|

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೆ ಇದೀಗ ಕರಾವಳಿಗೂ ಪೇ ಎಂಎಲ್ ಎ ಪೋಸ್ಟರ್ ಅಭಿಯಾನ ಎಂಟ್ರಿ ಕೊಟ್ಟಿದ್ದು, ಶಾಸಕರ ಫೋಟೋ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದಾರೆ.

Ad Widget ... ..

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಫೋಟೋ ಹಾಕಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದು, ಬೆಳ್ತಂಗಡಿಯ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಬಸ್ ಗಳಲ್ಲಿ ಪೇ ಎಂಎಲ್ ಎ ಪೋಸ್ಟರ್ ಅಂಟಿಸಿ ಅಭಿಯಾನ ಆರಂಭಿಸಿದ್ದಾರೆ.

Ad Widget

ಬೆಂಗಳೂರಿನಲ್ಲಿ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ರಾಜ್ಯ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದ್ದು, ಸರ್ಕಾರದ ವಿರುದ್ಧ 40 ಪರ್ಸೆಂಟ್​ ಕಮಿಷನ್​​ ಆರೋಪ ಮಾಡಿದೆ. ಈ ಬೆನ್ನಲ್ಲೇ ಕರಾವಳಿಯಲ್ಲೂ ಇದೀಗ ಪೇ ಎಂಎಲ್ ಎ ಅಭಿಯಾನ ಶುರುವಾಗಿದೆ.

Leave a Comment

Your email address will not be published. Required fields are marked *