ಕಳಸ:ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು ಎಂದ ಮಾರಮ್ಮನಿಗೆ ಪತ್ರ ಬರೆದ ಭಕ್ತ

ಸಮಗ್ರ ನ್ಯೂಸ್:  ಭಕ್ತರೊಬ್ಬರು ಮಾರಮ್ಮ ದೇವಿಯ ಬಳಿ ಬೇಡಿಕೊಂಡು ಬರೆದಿರುವ ವಿಚಿತ್ರ ಪತ್ರ ಕಳಸ ತಾಲೂಕಿನ ದಕ್ಷಿಣಕಾಶಿ
ಎಂದೇ ಖ್ಯಾತಿಯಾಗಿರೋ ಕಳಸೇಶ್ವರ ಸ್ವಾಮಿಯ ದೇವಸ್ಥಾನದಿಂದ ವರದಿಯಾಗಿದೆ.

Ad Widget ... ..

ಕಳಸ ತಾಲೂಕಿನ ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರೋ ಕಳಸೇಶ್ವರ ಸ್ವಾಮಿಯ ದೇವಸ್ಥಾನದಲ್ಲಿರುವ ಉಕ್ಕಡ ಮಾರಮ್ಮನ ಗುಡಿಯಲ್ಲಿರುವ ದೇವರ ಹುಂಡಿಯಲ್ಲಿ ಈ ಪತ್ರ ಪತ್ತೆಯಾಗಿದೆ ಅದರಲ್ಲಿ ಭಕ್ತರೊಬ್ಬರು ಮಾರಮ್ಮ ದೇವಿಯ ಬಳಿ ತಮ್ಮ ಕಷ್ಟಗಳನ್ನು ದೂರಮಾಡು ಮನೆಯವರಿಗೆ ಒಳ್ಳೆಯ ಕೆಲಸ ಕೊಡಿಸು, ಮದುವೆ ಯಾವುದೇ ವಿಘ್ನವಿಲ್ಲದೆ ನಡೆಯುವ ಹಾಗೆ ಮಾಡು ದೇವರೇ ಎಂದು ಮಾರಮ್ಮನಿಗೆ ಭಕ್ತರೊಬ್ಬರು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.

Ad Widget

ಈ ಪತ್ರದಲ್ಲಿ ತಾಯಿ ನಮ್ಮವ್ವ, ರಮೇಶ್-ಮಂಜುಳ ಸಂಬಂಳವನ್ನ ರಾಜಮ್ಮನ ಕೈಗೆ ಕೊಡಲಿ… ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು… ಐಶ್ವರ್ಯ ಬೇಗ ದಪ್ಪ ಆಗಿ, ದೃಷ್ಠಿಯಾಗಿ ಕಾಣುವಂತೆ ಮಾಡು.. ಮಂಜುಳ ಅತ್ತೆ-ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು… ಮಂಜುಳ ಮನಸ್ಸಿನಲ್ಲಿ ರಾಜಮ್ಮ, ಬಸವರಾಜುನನ್ನ ಒಳ್ಳೆಯವರಾಗಿಸು… ದೇವರಾಜುಗೆ ಕೈತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು.. ಎಂದು ದೇವರಿಗೆ ವಿಚಿತ್ರವಾಗಿ ಪತ್ರ ಬರೆದು ಬೇಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *