Ad Widget .

ಬೆಳ್ತಂಗಡಿ ; ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಯುವಕನೊಬ್ಬ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿ ನಡೆದಿದೆ.

Ad Widget . Ad Widget .

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೆರಿಯ ಗ್ರಾಮದ ಚಂದ್ರಶೇಖರ್ (24) ಎಂದು ಗುರುತಿಸಲಾಗಿದೆ.

Ad Widget . Ad Widget .

ವೃತ್ತಿಯಲ್ಲಿ ಗಾರೆ ಮತ್ತು ವೈರಿಂಗ್ ಕೆಲಸ ಮಾಡುತ್ತಿದ್ದ ಈತ , ಗೆಳೆಯರ ಜೊತೆಗೆ ಸೇರಿ ಶಬರಿ ಎಂಬ ಸ್ವಸಹಾಯ ಸಂಘ ರಚಿಸಿದ್ದು, ಈ ಸಂಘದ ಮೂಲಕ ಉಜಿರೆಯ ಖಾಸಗಿ ಬ್ಯಾಂಕಿನಿಂದ 4 ಲಕ್ಷ ರೂ. ಸಾಲ ಪಡೆದಿದ್ದರು.

ಈ ಹಣವನ್ನು ಎಂಟು ಜನ ಹಂಚಿಕೊಂಡಿದ್ದರು. ಆದರೆ ಚಂದ್ರಶೇಖರ್ ತೆಗೆದ ಸಾಲದ ಹಣವನ್ನು ಅಗತ್ಯ ಇದೆ ಎಂದು ಹೇಳಿ ಗೆಳೆಯ ಯೋಗೀಶ್ ಎಂಬಾತ ಪಡೆದುಕೊಂಡಿದ್ದು, ಆತ ಸಾಲ ಕಟ್ಟದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಪದೇ ಪದೇ ಚಂದ್ರಶೇಖರ್ ಗೆ ಕರೆ ಮಾಡುತ್ತಿದ್ದರು.

ಇದರಿಂದ ಮನನೊಂದ ಚಂದ್ರಶೇಖರ್ ಕಳೆದ ವಾರ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂಬ ಮಾಹಿತಿ ದೊರಕಿವೆ.

Leave a Comment

Your email address will not be published. Required fields are marked *