Ad Widget .

ಸುಳ್ಯ : ಸರಕಾರಿ ಜಾಗ ಅತಿಕ್ರಮಣ ಪ್ರಕರಣ ಸಂಬಂಧ

ಪ್ರತಿಭಟನೆ ಕೈ ಬಿಟ್ಟ ಅಂಬೇಡ್ಕರ್ ರಕ್ಷಣಾ ವೇದಿಕೆ

Ad Widget . Ad Widget .

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಕಸಬ ಗ್ರಾಮದ ಜಯನಗರದ ಸರಕಾರಿ ಶಾಲೆಯ ಹತ್ತಿರ ಗೋಪಾಲ್ ನಾಯಕ್ ಎಂಬವರು ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲು ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸಿದ್ದರು.

Ad Widget . Ad Widget .

ಈ ಹಿನ್ನಲೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸರಕಾರಿ ಜಾಗವನ್ನು ಆಕ್ರಮಿಸಿಕೊಂಡ ಗೋಪಾಲ್ ನಾಯಕ್ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಧ್ಯಮದ ಮೂಲಕ ಪಿ.ಸುಂದರ ಪಾಟಾಜೆಯವರು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು.

ಆ ವಿಚಾವಾಗಿ ಸೆ.22 ರಂದು ಪಿ.ಸುಂದರ ಪಾಟಾಜೆಯರು ಸುಳ್ಯ ತಹಶೀಲ್ದಾರರಾದ ಕ ಅನಿತಾ ಲಕ್ಷ್ಮಿ ಅವರನ್ನು ಭೇಟಿ ನೀಡಿ ಮಾತನಾಡಿದಾಗ ಅತಿಕ್ರಮಣ ಮಾಡಿದವರ ಮೇಲೆ ನಾವು ಕ್ರಮ ಕೈಗೊಂಡಿದ್ದೇವೆ, ಅವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದೇವೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಆ ಜಾಗವನ್ನು ಮುಟ್ಟಬಾರದು ಮುಟ್ಟಿದರೆ ನಿಮ್ಮ ಮೇಲೆ ಕೇಸ್ ಮಾಡಲಾಗುವುದೆಂದು ತಹಶೀಲ್ದಾರರಾರು ತಿಳಿಸಿದ್ದಾರೆ.

ಆ ಕಾರಣ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ಮಾಡುವುದಾಗಿ ಮಾಧ್ಯಮಕ್ಕೆ ಹೇಳಿಕೆಯನ್ನು ನೀಡಿದ್ದೇವೆ ಆ ಪ್ರತಿಭಟನೆಯನ್ನು ಕೈ ಬಿಡಲಾಗುವುದೆಂದು ಪಿಸುಂದರಪಾಟಾಜೆಯವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *