ಸಾಧನೆಗೆ ಅಡ್ಡಿಯಾಗದ ದಿವ್ಯಾಂಗ| ದ.ಕನ್ನಡದ ಈ ಯುವಕ ಎಲ್ಲರಿಗೂ ಸ್ಪೂರ್ತಿ

ಸಮಗ್ರ ನ್ಯೂಸ್: ದ.ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ಜನಾರ್ದನ ಗೌಡ ಮತ್ತು ಬೇಬಿ ದಂಪತಿಯ ಪುತ್ರ ಪ್ರದೀಪ್ ಬಿ.ಜೆ (23) ಅವರು ಎಂಡೋಸಲ್ಫಾನ್ ಸಮಸ್ಯೆಯಿಂದ ಅಂಗವೈಕಲ್ಯವನ್ನು ಮೀರಿ ಇತ್ತೀಚೆಗೆ ಶಿವಮೊಗ್ಗದ ತೀರ್ಥಹಳ್ಳಿಯ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗನಾಗಿ ನೇಮಕಗೊಂಡಿದ್ದಾರೆ.

Ad Widget ... ..

ಪ್ರತಿದಿನ ಅವರು ಮೊಣಕಾಲುಗಳ ಮೇಲೆ ನಡೆಯುತ್ತಾ ಕಚೇರಿಗೆ ಪ್ರವೇಶಿಸುತ್ತಿದ್ದಾರೆ. ಪ್ರದೀಪ್ ಅವರ ಕಾಲುಗಳು ಮೊಣಕಾಲಿನ ಕೆಳಗೆ ದುರ್ಬಲವಾಗಿವೆ. ಅವರ ಎಡಗೈಗೂ ಬಲವಿಲ್ಲ. ಆದಾಗ್ಯೂ ದೈಹಿಕ ಅಂಗವೈಕಲ್ಯ ಕಡೆಗಣಿಸಿದ ಅವರು, ಉತ್ತಮ ಶೈಕ್ಷಣಿಕ ದಾಖಲೆಯನ್ನು ಪಡೆದಿದ್ದಾರೆ.

Ad Widget

ಪ್ರಸ್ತುತ ಅವರು ತಮ್ಮ ಎಂಕಾಂ ವಿದ್ಯಾಭ್ಯಾಸವನ್ನೂ ಮುಂದುವರಿಸುತ್ತಿದ್ದಾರೆ.

ನನ್ನ ಜೀವನದ ಈ ಹೊಸ ಕೆಲಸದ ಪ್ರತಿ ನಿಮಿಷವನ್ನು ನಾನು ಆನಂದಿಸುತ್ತಿದ್ದೇನೆ.

ನಾನು ನನ್ನ ಕುಟುಂಬದಿಂದ ದೂರವಿರುವುದರಿಂದ ಸ್ವತಂತ್ರವಾಗಿದ್ದು, ಕರ್ತವ್ಯ ಮಾಡಲು ಪ್ರಯತ್ನಿಸುತ್ತಿದ್ದೇನೆ.

ಇಲ್ಲಿ ಕೆಲಸದಲ್ಲಿರುವ ನನ್ನ ಹಿರಿಯರು ಮತ್ತು ಸಹೋದ್ಯೋಗಿಗಳು ನನಗೆ ಉತ್ತಮ ಬೆಂಬಲವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಪ್ರದೀಪ್.

Leave a Comment

Your email address will not be published. Required fields are marked *