Ad Widget .

ಮದುವೆ ಆಗಿ ಒಂದು ವರ್ಷಕ್ಕೆ ಕೈಕೊಟ್ಟ ಪತಿ| ದಿಕ್ಕೆಟ್ಟ ಪತ್ನಿಯಿಂದ ಪತಿ ಸೇರಿ 16 ಮಂದಿ ವಿರುದ್ದ ದೂರು

ಸಮಗ್ರ ನ್ಯೂಸ್: ಪ್ರೀತಿಸಿ ವಿವಾಹವಾದ ಒಂದೇ ವರ್ಷಕ್ಕೆ ಸಂಸಾರದಲ್ಲಿ ಬಿರುಕು ಬಿಟ್ಟಿದ್ದು,‌‌ಪತ್ನಿಗೆ ಪತಿ ಕೈಕೊಟ್ಟಿರುವ ಘಟನೆ ಮೈಸೂರು‌ ಜಿಲ್ಲೆಯ ಹುಣಸೂರಿನಿಂದ ವರದಿಯಾಗಿದೆ.

Ad Widget . Ad Widget .

ಹೆತ್ತವರು ಹಾಗೂ ಸಂಬಂಧಿಕರ ಮಾತು ಕೇಳಿ ಪತಿ ಕೈಕೊಟ್ಟಿದ್ದು, ಜಾತಿ ನಿಂದನೆ ಮಾಡಿ ಅಪಪ್ರಚಾರ ಮಾಡಿ ಕೊಲೆ ಬೆದರಿಕೆ ಹಾಕಿ ಪತ್ನಿಯನ್ನ ದೂರ ಮಾಡಿದ ಹಿನ್ನಲೆ ವಂಚನೆಗೆ ಒಳಗಾದ ವಿವಾಹಿತೆ ನ್ಯಾಯಕ್ಕಾಗಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಗಂಡ ಸೇರಿದಂತೆ ಒಂದೇ ಕುಟುಂಬದ 16 ಮಂದಿ ಮೇಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Ad Widget . Ad Widget .

ಚಿತ್ರದುರ್ಗದ ಅಶ್ವಿನಿ(24) ಪತಿಯಿಂದ ವಂಚನೆಗೆ ಒಳಗಾದ ನತದೃಷ್ಟೆ. ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ ನ ಅಶ್ವಿನಿ ಜೂನ್ 2021 ರಲ್ಲಿ ಪ್ರೀತಿಸಿ ಮದುವೆ ಆಗಿದ್ದಳು.ಇವರಿಬ್ಬರ ಪ್ರೀತಿಗೆ ಇಬ್ಬರ ಕುಟುಂಬಸ್ಥರೂ ಸಹ ಒಪ್ಪಿಗೆ ನೀಡಿದ್ದರು. ನಂತರದ ದಿನಗಳಲ್ಲಿ ಇಬ್ಬರನ್ನೂ ಬೇರ್ಪಡಿಸುವ ಪ್ರಯತ್ನ ನಡೆದಿದೆ. ಜಾತಿ ಕಾರಣ ನೀಡಿರುವುದಲ್ಲದೆ ಅಶ್ವಿನಿ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ. ವಾಟ್ಸಾಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆಂದು ಪ್ರಚಾರ ಮಾಡಿದ್ದಾರೆ. ಇದೇ ನೆಪ ಇಟ್ಟುಕೊಂಡು ಪತಿ ಅಭಿಷೇಕ್ ಗೆ ಮತ್ತೊಂದು ಮದುವೆಗೆ ಸಂಭಂಧ ಹುಡುಕುತ್ತಿರುವುದಾಗಿ ಅಶ್ವಿನಿ ದೂರಿನಲ್ಲಿ ಆರೋಪಿಸಿದ್ದಾರೆ.

ಗಂಡ ಹಾಗೂ ಮನೆಯವರಿಂದ ತ್ಯಜಿಸಲ್ಪಟ್ಟ ಅಶ್ವಿನಿ ಇದೀಗ ಅತಂತ್ರಕ್ಕೆ ಸಿಲುಕಿದ್ದಾರೆ. ಪ್ರೀತಿಸಿ ಮದುವೆ ಆದ ಗಂಡನಿಗಾಗಿ ಪೊಲೀಸ್ ಠಾಣೆ ಮೆಟ್ಟಲೇರಿರುವ ಅಶ್ವಿನಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾಳೆ

Leave a Comment

Your email address will not be published. Required fields are marked *