Ad Widget .

ತನ್ನ ಪತಿಯನ್ನು ಹೋಟೆಲ್ ಕೋಣೆಯಲ್ಲಿ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಕಂಡ ಪತ್ನಿ| ಮುಂದೇನಾಯಿತು ವೀಡಿಯೊ ನೋಡಿ..!

Ad Widget . Ad Widget .

ದೆಹಲಿ: ತನ್ನ ಪತಿ ಹೋಟೆಲ್ ಕೋಣೆಯೊಂದರಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿರುವುದನ್ನು ಕಂಡ ಪತ್ನಿ ಪಾದರಕ್ಷೆಯಿಂದ ಪತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದ ದೆಹಲಿ ಗೇಟ್ ಸಮೀಪ ನಡೆದಿರುವುದಾಗಿ ವರದಿ ತಿಳಿಸಿದೆ.

Ad Widget . Ad Widget .

ತಂದೆಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯವನ್ನು ಮಗಳು ಸೆರೆಹಿಡಿದಿದ್ದು,ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ. ಮಹಿಳೆಯನ್ನು ನೀಲಂ ಎಂದು ಗುರುತಿಸಲಾಗಿದ್ದು, ಪತಿ ದಿನೇಶ್ ಗೋಪಾಲ್ ಎಂಬುದಾಗಿ ವರದಿ ತಿಳಿಸಿದೆ.

ತನ್ನ ಪತಿ ದೀರ್ಘಕಾಲದಿಂದಲೂ ಇದೇ ರೀತಿ ವರ್ತಿಸುತ್ತಿರುವುದಾಗಿ ನೀಲಂ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ನಮಗೆ 16 ವರ್ಷದ ಮಗಳು ಮತ್ತು ಒಂಬತ್ತು ವರ್ಷದ ಮಗನಿದ್ದಾನೆ. ಮಕ್ಕಳಿಗೂ ಕೂಡಾ ತಂದೆಯ ಕೆಟ್ಟ ಚಾಳಿ ಬಗ್ಗೆ ತಿಳಿದಿದೆ ಎಂದು ದೂರಿದ್ದಾರೆ.

ತಂದೆಯ ಕೆಟ್ಟ ನಡವಳಿಕೆಯಿಂದ ರೋಸಿ ಹೋಗಿರುವ ಮಗಳು ಕೂಡಾ ತಂದೆ ಎಂದು ಕರೆಯಲು ನಿರಾಕರಿಸುತ್ತಿದ್ದಾಳೆ. ಹೀಗಾಗಿ ತಂದೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಪತ್ನಿ ಮತ್ತು ಮಗಳು ಹಿಂಬಾಲಿಸಿಕೊಂಡು ಬಂದಿದ್ದು, ಹೋಟೆಲ್ ನಲ್ಲಿ ಮತ್ತೊಬ್ಬ ಮಹಿಳೆ ಜೊತೆ ತಂದೆ ಚಕ್ಕಂದವಾಡುತ್ತಿರುವ ದೃಶ್ಯವನ್ನು ಮಗಳು ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ನೀಲಂ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ನಿ ಹೋಟೆಲ್ ಕೋಣೆಯೊಳಗೆ ನುಗ್ಗಿ ಪತಿ ಹಾಗೂ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ತನ್ನನ್ನು ಕ್ಷಮಿಸಿಬಿಡು ಎಂದು ಪತಿ ಗೋಗರೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಘಟನೆ ಬಗ್ಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿರುವುದಾಗಿ ವರದಿ ವಿವರಿಸಿದೆ.

Leave a Comment

Your email address will not be published. Required fields are marked *