Ad Widget .

ಏರ್ ಫೋರ್ಸ್ ತರಬೇತಿ ಗೆ ಬಂದಿದ್ದ ಯುವಕ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಏರ್‌ಫೋರ್ಸ್‌ ತರಬೇತಿಗೆ ಬಂದಿದ್ದ ಯುವಕ ತನ್ನನ್ನು ಕೈಬಿಟ್ಟದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Ad Widget . Ad Widget .

ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆಯೊಂದು ನಡೆದಿದೆ. ಅಂಕಿತ್ ಕುಮಾರ್ (27) ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ.

Ad Widget . Ad Widget .


ಅಂಕಿತ್‌ ಕುಮಾರ್‌ ದೆಹಲಿ ಮೂಲದವನಾಗಿದ್ದು, ಇಲ್ಲಿಗೆ ಏರ್‌ಫೋರ್ಸ್‌ ತರಬೇತಿಗೆ ಬಂದಿದ್ದ. ಕಾರಣಾಂತರಗಳಿಂದ ತರಬೇತಿಯಿಂದ ಅಂಕಿತ್‌ನನ್ನು ಕೈಬಿಡಲು ನಿರ್ಧರಿಸಲಾಗಿತ್ತು.

ಈ ಹಿನ್ನೆಲೆ‌ ಖಿನ್ನತೆಗೊಳಗಾದ ಯುವಕ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಅಂಕಿತ್ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಕೊಲೆಯೆಂದು ಆರೋಪಿಸಿ ಗಂಗಮ್ಮನಗುಡಿ ಠಾಣೆಗೆ ದೂರು ನೀಡಿದ್ದಾರೆ.

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *