ರಸ್ತೆ ಗುಂಡಿಗಳ ಮಧ್ಯೆ ವೆಡ್ಡಿಂಗ್ ಪೋಟೋಶೂಟ್….!!

ಕೇರಳ: ವಧು-ವರ ಇಬ್ಬರೂ ವೆಡ್ಡಿಂಗ್‌ ಫೋಟೋಶೂಟ್‌ ಹೇಗೆ ಮಾಡಿಸೋದು ಅಂತಾ ಪ್ರೀ ಪ್ಲಾನ್‌ ಮಾಡ್ಕೊಂಡಿರ್ತಾರೆ. ಇದಕ್ಕಾಗಿ ತಮ್ಮ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ತಾರೆ. ಆದ್ರೆ, ಇಲ್ಲೊಬ್ಬ ವಧು ಗುಂಡಿಗಳಿಂದ ಕೂಡಿದ ರಸ್ತೆ ರಸ್ತೆಯಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ.

Ad Widget ... ..

ಹೌದು, ಕೇರಳದ ವಧುಯೊಬ್ಬರು ತಮ್ಮ ಮದುವೆಯ ಚಿತ್ರೀಕರಣವನ್ನು ಸ್ಮರಣೀಯವಾಗಿಸಲು ನಿರ್ಧರಿಸಿ, ಆ ಪ್ರದೇಶದಲ್ಲಿನ ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಿದ್ದಾರೆ. ಇದೀಗ ವಧು ಮತ್ತು ವಿವಾಹದ ಛಾಯಾಗ್ರಾಹಕರನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Ad Widget

ಕೆಂಪು ಸೀರೆ ಉಟ್ಟ ವಧು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ, ಕೆಳಗೆ ಬೀಳದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವಾಗ ವಾಹನಗಳು ಹಾದುಹೋಗುವುದನ್ನು ಸಹ ನೋಡಬಹುದು.

Leave a Comment

Your email address will not be published. Required fields are marked *