ಪಿರಿಯಾಪಟ್ಟಣ: ಗಂಧದ ಮರ ಕಳ್ಳತನ| ಓರ್ವ ಬಂಧನ, ಮತ್ತೊಬ್ಬ ಪರಾರಿ

ಸಮಗ್ರ ನ್ಯೂಸ್: ಮೀಸಲು ಅರಣ್ಯ ಪ್ರದೇಶದಿಂದ ಗಂಧದ ಮರ ಕಳ್ಳತನ ಮಾಡಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

Ad Widget ... ..

ಹುಣಸೂರು ತಾಲೂಕಿನ ದೇವರಾಜ ಕಾಲೋನಿಯ ಮಹದೇವ್ ಬಂಧಿತ ಆರೋಪಿ, ಮತ್ತೊಬ್ಬ ಪರಾರಿಯಾಗಿದ್ದಾನೆ.

Ad Widget

ಇವರು ಅರನೇನಹಳ್ಳಿ ಮೀಸಲು ಅರಣ್ಯದ ಶ್ರೀಗಂಧದ ಪ್ಲಾಂಟೇಷನ್ ನಿಂದ 5 ಲಕ್ಷ ರೂ. ಬೆಲೆಬಾಳುವ ಸುಮಾರು 45 ಕೆ.ಜಿ ತೂಕದ ಗಂಧದ ಮರದ ತುಂಡನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹುಣಸೂರು-ಗೋಣಿಕೊಪ್ಪ ರಸ್ತೆಯ ಕರ್ಣನ‌ ಕುಪ್ಪೆ ಗೇಟ್ ಬಳಿ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ ಎಫ್ ಒ ವೈ ಕೆ ಕಿರಣ್ ಕುಮಾರ್, ಡಿಆರ್ ಎಫ್ ಓ ಗಳಾದ ಮಹೇಶ್, ಪಾರ್ವತಿ ಹಾಗೂ ಸಿಬ್ಬಂದಿ ಇದ್ದರು.

Leave a Comment

Your email address will not be published. Required fields are marked *