Ad Widget .

ಇದಪ್ಪಾ ಆಟ ಅಂದ್ರೆ| ಬ್ಯಾಟಿಂಗ್ ನಲ್ಲಿ ಪಂಟರ್, ಬೌಲಿಂಗ್ ನಲ್ಲಿ ಉಡೀಸ್| ಸಿಪಿಎಲ್ ಲೀಗ್ ನಲ್ಲಿ ಒಡಿಯನ್ ಸ್ಮಿತ್ ಅಬ್ಬರಕ್ಕೆ ಮೈದಾನದಲ್ಲಿ ಬಿರುಗಾಳಿ

ಸಮಗ್ರ ನ್ಯೂಸ್: ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯರ್ ಪ್ರೀಮಿಯರ್ ಲೀಗ್​ನಲ್ಲಿ ಒಡಿಯನ್ ಸ್ಮಿತ್ ಅಕ್ಷರಶಃ ಅಬ್ಬರಿಸಿದ್ದಾರೆ.

Ad Widget . Ad Widget .

ಸಿಪಿಎಲ್​ನ 25ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಜಮೈಕಾ ತಲ್ಲವಾಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮೈಕಾ ನಾಯಕ ರೋವ್ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಜಮೈಕಾ ಬೌಲರ್​ಗಳು 15 ಓವರ್​ನಲ್ಲಿ ನೀಡಿದ್ದು ಕೇವಲ 97 ರನ್​ಗಳು ಮಾತ್ರ. ಅಷ್ಟೇ ಅಲ್ಲದೆ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ 6 ಪ್ರಮುಖ ವಿಕೆಟ್​ಗಳನ್ನು ಕೂಡ ಉರುಳಿಸಿದ್ದರು.

Ad Widget . Ad Widget .

ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಡಿಯನ್ ಸ್ಮಿತ್ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ವಿಶೇಷ. ಅಂದರೆ ಡೆತ್​ ಓವರ್​ಗಳ ವೇಳೆ ಬ್ಯಾಟ್ ಬೀಸಿದ ಸ್ಮಿತ್ ಅಕ್ಷರಶಃ ಅಬ್ಬರಿಸಿದರು. ಅದರಲ್ಲೂ ಪ್ರಿಟೋರಿಯಸ್ ಎಸೆದ 18ನೇ ಓವರ್‌ನಲ್ಲಿ ಸಿಕ್ಸ್​ಗಳ ಸುರಿಮಳೆಗೈದರು.

ಪ್ರಿಟೋರಿಯಸ್‌ನ ಮೊದಲ ಎಸೆತದಲ್ಲಿ ಸ್ಮಿತ್ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸರ್ ಬಾರಿಸಿದರು. ಎರಡನೇ ಎಸೆತದಲ್ಲಿ ಯಾವುದೇ ರನ್​ ಮೂಡಿಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಡೀಪ್​ ಕವರ್​ನತ್ತ ಸಿಕ್ಸ್ ಸಿಡಿಸಿದರು. ನಾಲ್ಕನೇ ಎಸೆತ ವೈಡ್. ಆ ಬಳಿಕ ಎಸೆದ ಮತ್ತೊಂದು ಎಸೆತದಲ್ಲಿ ಮಿಡ್ ವಿಕೆಟ್​ನತ್ತ ಸಿಕ್ಸರ್ ಬಾರಿಸಿದರು. ಐದನೇ ಮತ್ತು ಆರನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಬಾರಿಸುವ ಮೂಲಕ ಒಡಿಯನ್ ಸ್ಮಿತ್ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿದರು. ಇನ್ನು 20ನೇ ಓವರ್​ನಲ್ಲಿ ಮತ್ತೊಂದು ಸಿಕ್ಸ್ ಸಿಡಿಸುವ ಮೂಲಕ ಕೇವಲ 16 ಎಸೆತಗಳಲ್ಲಿ 42 ರನ್​ ಚಚ್ಚಿದರು.

Leave a Comment

Your email address will not be published. Required fields are marked *