Ad Widget .

ಇದು ಇಡೀ ಮನುಕುಲವೇ ತಲೆ ತಗ್ಗಿಸುವ ಕಥೆ| ಯೋಗಿ ನಾಡಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜಾತ್ರೆಗೆ ತೆರಳಿದ್ದ 15 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಆಕೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇದರಿಂದ ರಕ್ತಸ್ರಾವವಾಗುತ್ತಿದ್ದ ಆಕೆ ತನ್ನ ಪ್ರಾಣ ಉಳಿಸಿಕೊಳ್ಳಲು ರಸ್ತೆಯಲ್ಲಿ ನಗ್ನವಾಗಿಯೇ ಓಡಿಕೊಂಡು ಹೋಗುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Ad Widget . Ad Widget .

ಅತ್ಯಾಚಾರಕ್ಕೊಳಗಾದ ಬಾಲಕಿಯ ಬಟ್ಟೆಯನ್ನು ಕಸಿದುಕೊಂಡ ಕಾಮುಕರು ಆಕೆಯನ್ನು ಬೆತ್ತಲೆಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ. ಆ ರಸ್ತೆಯಲ್ಲಿ ರಾತ್ರಿ ವೇಳೆ ಆ ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಸವಾರರು, ಕಾರು ಚಾಲಕರು ತಮ್ಮ ವಾಹನವನ್ನು ನಿಲ್ಲಿಸಿ ಆಕೆಯನ್ನೇ ನೋಡುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.

Ad Widget . Ad Widget .

ಈ ಘಟನೆ ನಡೆದ 15 ದಿನಗಳ ನಂತರ ಈ ವಿಡಿಯೋ ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಸೃಷ್ಟಿಸಿದೆ. 30 ಸೆಕೆಂಡುಗಳ ಈ ವಿಡಿಯೋದಲ್ಲಿ 15 ವರ್ಷದ ಹುಡುಗಿ ರಸ್ತೆಯಲ್ಲಿ ನಗ್ನವಾಗಿ ನಡೆಯುತ್ತಿರುವುದನ್ನು ನೋಡಬಹುದು. ಸಾಕಷ್ಟು ರಕ್ತಸ್ರಾವವಾಗುತ್ತಿದ್ದಾಗ ಆ ಬಾಲಕಿ ನಗ್ನ ಸ್ಥಿತಿಯಲ್ಲಿಯೇ ರಸ್ತೆಯಲ್ಲಿ ನಡೆದುಕೊಂಡು ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ತಲುಪಿದ್ದಾಳೆ.

ಅತ್ಯಾಚಾರದ ನಂತರ ಬಾಲಕಿ ಸಂಪೂರ್ಣ ಆಘಾತಕ್ಕೊಳಗಾಗಿದ್ದು, ಅದೇ ಸ್ಥಿತಿಯಲ್ಲಿಯೇ ಅವಳು ತನ್ನ ಮನೆಗೆ ನಗ್ನವಾಗಿ ತೆರಳಿದ್ದಾಳೆ. ಅತ್ಯಾಚಾರ ನಡೆದ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ಆಕೆ ನಡೆದುಕೊಂಡೇ ಹೋಗಿದ್ದಾಳೆ. ಕಾಮುಕರು ಆಕೆಯ ಮೈಮೇಲೆ ಸಣ್ಣ ತುಂಡು ಬಟ್ಟೆಯನ್ನೂ ಬಿಟ್ಟಿರಲಿಲ್ಲ. ಆಕೆಯನ್ನು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಹೊರಗೆ ಎಸೆಯಲಾಯಿತು. ಅಲ್ಲಿಂದ ಆಕೆ ನಡೆದುಕೊಂಡು, ಓಡಿಕೊಂಡು ಮನೆ ತಲುಪಿದ್ದಾಳೆ.

ಮತ್ತೊಂದು ಆಘಾತಕಾರಿ ಅಂಶವೆಂದರೆ‌ ದಾರಿಹೋಕರು ಆ ಹುಡುಗಿಗೆ ಸಹಾಯ ಮಾಡುವ ಬದಲು ಮೂಕ ಪ್ರೇಕ್ಷಕರಂತೆ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲದೆ, ಹಲವರು ಆಕೆ ನಗ್ನವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಆದರೆ, ಇದ್ಯಾವುದರ ಪರಿವೆಯೂ ಇಲ್ಲದ ಆ ಬಾಲಕಿ ಆಘಾತದಿಂದ ತನ್ನಷ್ಟಕ್ಕೆ ತಾನು ಮೈಮೇಲೆ ಪ್ರಜ್ಞೆ ಇಲ್ಲದಂತೆ ನಡೆದುಕೊಂಡು ಹೋಗುತ್ತಲೇ ಇದ್ದಳು.

ಆ ಬಾಲಕಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಸೆಪ್ಟೆಂಬರ್ 7ರಂದು ಎಫ್‌ಐಆರ್ ದಾಖಲಿಸಿದ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿ ಹಾಗೂ ಆಕೆಯ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *