ಚಿಕ್ಕಮಗಳೂರು: ಬಸ್ಸಿನಿಂದ ಬಿದ್ದು ನಿಷ್ಕ್ರಿಯಗೊಂಡ ಯುವತಿಯ ಮೆದುಳು| ನೋವಿನ ನಡುವೆಯೂ ಅಂಗಾಂಗ‌ ದಾನಕ್ಕೆ ನಿರ್ಧರಿಸಿದ‌ ಕುಟುಂಬಸ್ಥರು|

ಸಮಗ್ರ ನ್ಯೂಸ್: ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಯುವತಿಯೋರ್ವಳು ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.

Ad Widget ... ..

ಅಪಘಾತದಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು, ಮೆದುಳು ನಿಷ್ಕ್ರಿಯಗೊಂಡ ಕಾರಣ ಯುವತಿಯ ಮನೆಯವರು ನೋವಿನ ನಡುವೆಯೂ ಮಾನವೀಯತೆ ಮೆರೆದಿದ್ದು, ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.

Ad Widget

ಈ ಸಂಬಂಧ ಯುವತಿಯ ಹೃದಯವನ್ನು ಕಸಿ ಮಾಡಲು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಜೀವಂತ ಹೃದಯವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದೆ.

ಒಟ್ಟು 9 ಅಂಗಾಂಗಗಳನ್ನು ದಾನ ಮಾಡಲಾಗುತ್ತಿದ್ದು, ಯುವತಿಯ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

Leave a Comment

Your email address will not be published. Required fields are marked *