Ad Widget .

ವಿಜಯಪುರ: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರ| ಬಂಧಿತರ ಸಂಖ್ಯೆ ಮೂರಕ್ಕೇರಿಕೆ

ಸಮಗ್ರ ನ್ಯೂಸ್: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ನೇಮಕಾತಿಯಲ್ಲೂ ವಿಜಯಪುರ ಜಿಲ್ಲೆಗೂ ನಂಟು ಹೊಂದಿದ್ದು,ಅಕ್ರಮವಾಗಿ ನೇಮಕಾತಿಯಾಗಿರೋ ಮತ್ತೋರ್ವ ಶಿಕ್ಷಕನ ಬಂಧನವಾಗಿದೆ. ಬಂಧಿತರ ಸಂಖ್ಯೆ ಇದೀಗ ಮೂರಕ್ಕೇರಿದೆ.

Ad Widget . Ad Widget .

ವಿಜಯಪುರ ಜಿಲ್ಲಾ ಮೂಲದ ಅಶೋಕ ಚವ್ಹಾಣ್ ಬಂಧಿತ ಮತ್ತೋರ್ವ ಶಿಕ್ಷಕರಾಗಿದ್ದಾರೆ. ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ ಚವ್ಹಾಣ್ ಇವರ ವಿರುದ್ಧ ಸೂಕ್ತ ಮಾಹಿತಿ ಕಲೆ ಹಾಕಿ ಅಕ್ರಮ ನೇಮಕಾತಿ ಹೊಂದಿದ್ದನ್ನು ಖಚಿತಪಡಿಸಿಕೊಂಡಿರೋ ಸಿಓಡಿ ಅಧಿಕಾರಿಗಳು ಇದೀಗ ಬಂಧಿಸಿದ್ದಾರೆ.

Ad Widget . Ad Widget .

ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಮೊದಲು ಸೇವೆ ಸಲ್ಲಿಸಿದ್ದ ಶಿಕ್ಷಕ ಬಳಿಕ ವಿಜಯಪುರ ಜಿಲ್ಲೆಗೆ ವರ್ಗವಾಗಿ ಬಂದಿದ್ದು ಈ ಮೂಲಕ ಅಕ್ರಮ ಶಿಕ್ಷಕರ ನೇಮಕಾತಿಯಲ್ಲಿ ಬಂಧನವಾದ ಜಿಲ್ಲೆಯ ಮೂರನೇ ಶಿಕ್ಷಕರಾಗಿದ್ದಾರೆ.

ಈಗಾಗಲೇ ಜಿಲ್ಲೆಯ ಇಬ್ಬರು ಶಿಕ್ಷಕರ ಬಂಧನವಾಗಿದೆ. ಜಿಲ್ಲೆಯ ಚಡಚಣ ತಾಲುಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ ಸೂಸಲಾದಿ ಹಾಗೂ ಕಪನಿಂಬರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಿದ್ರಾಮಪ್ಪಬಿರಾದಾರ್ ಬಂಧನವಾಗಿದೆ. ಇದೀಗಾ ಅಶೋಕ ಚೌವ್ಹಾಣ್ ಬಂಧನದಿಂದ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಈ ಮೂವರ ವಿಚಾರಣೆ ಬಳಿಕ ಮತ್ತಷ್ಟು ಹಗಣರ ಹೊರಗೆ ಬರಲಿದೆ.

Leave a Comment

Your email address will not be published. Required fields are marked *