Ad Widget .

ಕ್ಯಾನ್ಸರ್ ನಿಂದ ಬಳಲುವ ವಿದ್ಯಾರ್ಥಿನಿಗೆ, ಪ್ರೇತದ ವೇಷ ಧರಿಸಿ ಹಣ ಸಂಗ್ರಹಕ್ಕೆ ನೆರವಾದ ವ್ಯಕ್ತಿ; ಇವರಿಗೆ ಸಾಥ್ ನೀಡಿದ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್ : ವ್ಯಕ್ತಿಯೋರ್ವ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿದ್ಯಾರ್ಥಿನಿಯ ಸಹಾಯಕ್ಕಾಗಿ ಪ್ರೇತದ ವೇಷ ಧರಿಸಿ ಜನರಿಂದ ಹಣ ಸಂಗ್ರಹಣೆ ಮಾಡಿ ನೆರವಾಗಿದ್ದಾರೆ. ಇವರಿಗೆ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.

Ad Widget . Ad Widget .

ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಕಾಲೇಜ್ ವಿದ್ಯಾರ್ಥಿನಿ ರಶ್ಮಿತಾ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ.

Ad Widget . Ad Widget .

ಇದೀಗ ಅವರಿಗೆ ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ರಶ್ಮಿಕಾ ಚಿಕಿತ್ಸೆಗಾಗಿ 20 ಲಕ್ಷಕ್ಕೂ ಹೆಚ್ಚಿನ ಹಣದ ಅವಶ್ಯಕತೆ ಇದೆ. ವಿದ್ಯಾರ್ಥಿನಿ ರಶ್ಮಿತಾ, ತಂದೆ ತಾಯಿ ಕಡು ಬಡವರಾಗಿದ್ದು ಆಸ್ಪತ್ರೆಯ ವೆಚ್ಚ ಬರಿಸಲು ಈ ಕುಟುಂಬಕ್ಕೆ ಕಷ್ಟವಾಗಿದೆ.

ಇದೀಗ ರಶ್ಮಿತಾಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾವುಂದ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ವೇಷ ಧರಿಸಿ ನಗರದಲ್ಲಿ ಸಂಚರಿಸಿ ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.

ವಿದ್ಯಾರ್ಥಿ, ಬೆಂಕಿ ಮನಿ ಸಂತೋಷ್ ಪ್ರೇತದ ವೇಷ ಧರಿಸಿ ಕುಂದಾಪುರ ಸಂತೆಯಲ್ಲಿ ಹಾಗೂ ಪೇಟೆ ಭಾಗದ ಹಲವು ಅಂಗಡಿ ಮುಗ್ಗಟ್ಟುಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಣೆ ಮಾಡಿ ರಶ್ಮಿತಾಳ ಕುಟುಂಬಕ್ಕೆ ನೀಡಿದ್ದಾರೆ.

ಅಲ್ಲದೇ ಸಾರ್ವಜನಿಕರಲ್ಲಿ ದಾನಿಗಳಲ್ಲಿ ವಿದ್ಯಾರ್ಥಿನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *