Ad Widget .

ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು?

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದರೂ ಗ್ರಾಮೀಣ ಭಾರತ ಇಂದಿಗೂ ಅದೇ ಪರಿಸ್ಥಿತಿಯಲ್ಲಿದೆ ಎಂಬುದು ಅಉಳ್ಯ ತಾಲೂಕಿನಲ್ಲಿ ಮತ್ತೆ‌ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ದ.ಕ ಜಿಲ್ಲೆಯ‌ ಸುಳ್ಯ ತಾಲೂಕಿನ ಅಮರ ಪಡ್ನೂರು‌ ಗ್ರಾಮದ ಶೇಣಿ-ಹೊಸಮಜಲು ರಸ್ತೆ. ಈ‌ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನರು ನಡೆದುಕೊಂಡು ಹೋಗುವುದಕ್ಕೆ ಕಷ್ಟ ಪಡುವಂತಾಗಿದೆ.

Ad Widget . Ad Widget .

ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರುಮಯವಾಗಿರುವ ಈ ರಸ್ತೆ ಶೇಣಿಯಿಂದ ಹೊಸಮಜಲು ಎಂಬಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ.

Ad Widget . Ad Widget .

ಅಮರ ಪಡ್ನೂರು ಗ್ರಾಮದ ಅತೀ ಪುರಾತನ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ರಸ್ತೆಯನ್ನು 25 ಕ್ಕಿಂತ ಹೆಚ್ಚು ಮನೆಯವರು ಅವಲಂಬಸಿದ್ದಾರೆ.

1954 ನೇ ಇಸವಿಯಲ್ಲಿ ನಿರ್ಮಿಸಲಾದ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟು ಕೆಸರುಮಯವಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನನಾಯಕರು ಇತ್ತ ಗಮನ ಹರಿಸದಿರುವುದು ದುರಂತ. ಶಾಲಾ ಮಕ್ಕಳು, ಸಾರ್ವಜನಿಕರು ಈ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇದೀಗ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದ್ದು ಅದಕ್ಕೂ ತೊಂದರೆಯಾಗಿದೆ.

ಇನ್ನು ವಾಹನ ಸವಾರರ ಕಷ್ಟ ಹೇಳ ತೀರದು, ಬಹಳಷ್ಟು ಜನ ವಾಹನ ಸವಾರರು ಈ ರಸ್ತೆಯ ದುರವಸ್ಥೆಯಿಂದ ಕಂಗಾಲಾಗಿದ್ದಾರೆ.
ಇನ್ನಾದರೂ ಸ್ಥಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಲ್ಲಿನ ಸಮಸ್ಯೆಗೆ ಸ್ಪಂದಿಸುತ್ತಾರಾ? ಅಥವಾ ಚುನಾವಣಾ ಸಮಯದಲ್ಲಿ ಬಂದು ಕೇವಲ ಭರವಸೆಗಳನ್ನು ಕೊಟ್ಟು ಸುಮ್ಮನಾಗುತ್ತಾರಾ ಕಾದು ನೋಡಬೇಕಿದೆ.

https://m.facebook.com/story.php?story_fbid=pfbid0dUdt5uxwogKQbv1wtvcxcV7vrfg1jHJwAWTFD73FMLouu1AMjZcDNcwGyPzafnVYl&id=100083341387297&sfnsn=mo

Leave a Comment

Your email address will not be published. Required fields are marked *