ಸಮಗ್ರ ನ್ಯೂಸ್: ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್ ನಗರ ತಾಲೂಕಿನ ಭೇರ್ಯ ಸಮೀಪದ ಸಂಬ್ರವಳ್ಳಿ ಗ್ರಾಮದಲ್ಲಿ ನಡೆದಿದೆ.

ಸಂಬ್ರವಳ್ಳಿ ಗ್ರಾಮದಲ್ಲಿ ಬೆಟ್ಟಪ್ಪ (50) ಮತ್ತು ರುಕ್ಮಿಣಿ(43) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಭೇರ್ಯ ಗ್ರಾಮದ ಜಮೀರ್ ಸಾಹೇಬ್ ಅವರ ತೋಟದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು.
ಮಕ್ಕಳ ಮದುವೆ ಮಾಡಿ, ಅಲ್ಲದೆ ಮನೆ ಕಟ್ಟಿ ಕೈ ತುಂಬ ಸಾಲ ಮಾಡಿದ್ದರು. ಇದೀಗ ಮಾಡಿದ ಸಾಲಕ್ಕೆ ಹೆದರಿ ಅದೇ ತೋಟದ ಬಾವಿಯಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.