Ad Widget .

ಹುಣಸೂರು: ಸರ್ಕಾರಿ ಜಾಗ ಪ್ರಭಾವಿಗಳ‌ ಪಾಲು| ಒತ್ತುವರಿ ಜಮೀನಿನಲ್ಲಿ ಅಂಗನವಾಡಿ ನಿರ್ಮಿಸಲು ಒತ್ತಾಯ

ಸಮಗ್ರ ನ್ಯೂಸ್: ಸರ್ಕಾರಿ ಜಾಗ ಪ್ರಭಾವಿಗಳ ಪಾಲಾಗುತ್ತಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಮೂಕನಹಳ್ಳಿ ಗ್ರಾಮದ ಭರತ್ ಎಂಬವವರು ಗ್ರಾಮದ ಉಪಯೋಗಕ್ಕಾಗಿ ಬಿಟ್ಟಿದ್ದ ಸರ್ಕಾರಿ ಜಾಗದಲ್ಲಿ ಅಕ್ರಮ ಮಾಡಿಕೊಂಡು ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನಲೆ ಅದನ್ನು ತಡೆದು ಸರ್ಕಾರದ ವಶಕ್ಕೆ ಪಡೆಯ ಬೇಕಿದೆ.

Ad Widget . Ad Widget .

ಅದಲ್ಲದೆ ಗ್ರಾಮದಲ್ಲಿ 10ವರ್ಷಗಳಿಂದ ಅಂಗನವಾಡಿ ಕಟ್ಟಡ ಇಲ್ಲದೆ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಯುತ್ತಿದೆ. ಹಾಗಾಗಿ ಈ ಸರಕಾರಿ ಜಾಗದಲ್ಲಿ ಅಂಗನವಾಡಿ ಕಟ್ಟಬೇಕು ಅಥವಾ ಮೂಕನಹಳ್ಳಿ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಅಧ್ಯಕ್ಷ ಮಹದೇವ ಸೈಯದ್ ನಾಸೀರ್ ಸೇಠ್ ವೀಶಾಂತ್ ಅವರು ಮೂಕನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಶ್ರೀನಿವಾಸ್ ಅವರಿಗೆ ಮನವಿ ಪತ್ರ ನೀಡಿದರು.

Leave a Comment

Your email address will not be published. Required fields are marked *