Ad Widget .

ಬೆಳಗಾವಿ: ಗ್ರಾ.ಪಂ ಕಚೇರಿಯಲ್ಲಿ ಅಧ್ಯಕ್ಷೆಯ ಗಂಡನ ದರ್ಬಾರ್|ಭರ್ಜರಿ ಬರ್ತ್ ಡೇಗೆ ಪಂಚಾಯತ್ ಸಿಬ್ಬಂದಿ ಸಾಥ್

ಸಮಗ್ರ ನ್ಯೂಸ್: ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆಯ ಗಂಡನ ದರ್ಬಾರ್ ನಿಂದ ಭರ್ಜರಿ ಬರ್ತ್ ಡೇ ಆಚರಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಪಂಚಾಯತ್ ನಲ್ಲಿ ನಡೆದಿದೆ.

Ad Widget . Ad Widget .

ಈ ಗ್ರಾಮ ಪಂಚಾಯತ್ ನಲ್ಲಿ ಸವಿತ ಎಂಬಾಕೆ ಅಧ್ಯಕ್ಷರಾಗಿದ್ದಾರೆ. ಇದೀಗ ಆಕೆಯ ಪತಿ ಅಪ್ಪಾಸಾಹೇಬ್ ಚೌಗಲಾ ತನ್ನ ಹುಟ್ಟುಹಬ್ಬವನ್ನು ಇದೇ ಪಂಚಾಯತ್ ಸಭಾಂಗಣದಲ್ಲಿ ಆಚರಿಸಿಕೊಂಡಿದ್ದಾರೆ. ಇದಲ್ಲದೆ ಈ ಪಾರ್ಟಿಗೆ ಗ್ರಾಮ ಪಂಚಾಯತ್ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ.

Ad Widget . Ad Widget .

ಇನ್ನು ನಿಯಮದ ಪ್ರಕಾರ ಸರಕಾರಿ ಕಚೇರಿಗಳಲ್ಲಿ ಜನ್ಮದಿನಾಚರಣೆ ಮಾಡಕೊಳ್ಳಬಾರದು ಮತ್ತು ಪಂಚಾಯತ್ ‌ಕೆಲಸಗಳಲ್ಲಿ ಮನೆಯವರು ಹಸ್ತ ಕ್ಷೇಪ ಮಾಡಬಾರದು ಎಂಬ ಕಾನೂನುವಿದ್ದರೂ ಸಹ‌ ಕಾನೂನು ಉಲ್ಲಂಘನೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಮೇಲಾಧಿಕಾರಿಗಳು ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕಾಗಿದೆ.

ಇದಲ್ಲದೆ ಹಲವು ವಿಚಾರಗಳಲ್ಲಿ ಪಂಚಾಯತ್ ನಲ್ಲಿ ಮಹಿಳಾ ಅಧ್ಯಕ್ಷೆಯ ಗಂಡನದ್ದೇ ಕಾರುಬಾರು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಈ ಬಗ್ಗೆವೂ ಸೂಕ್ತ ತನಿಖೆಯಾಗಬೇಕಾಗಿದೆ.

Leave a Comment

Your email address will not be published. Required fields are marked *