Ad Widget .

ಬಂಟ್ವಾಳ; ನಿನ್ನೆ ಬಸ್ ನಲ್ಲಿ ಮಹಿಳೆಯ ಬ್ಯಾಗ್ ನಿಂದ ಪರ್ಸ್ ಕದ್ದ ಕಳ್ಳಿ ಅಜ್ಜಿ , ಇಂದು ಪೋಲಿಸ್ ವಶ

ಬಂಟ್ವಾಳ: ಮಂಗಳವಾರ ಬೆಳಿಗ್ಗೆ ಮಹೇಶ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗಿನಿಂದ ಪರ್ಸ್ ಎಗರಿಸಿದ್ದ ಕಳ್ಳಿ ಅಜ್ಜಿಯನ್ನು ಪತ್ತೆ ಹಚ್ಚಲಾಗಿದ್ದು, ಸದ್ಯಕ್ಕೆ ಕಂಕನಾಡಿ ಪೊಲೀಸರ ವಶದಲ್ಲಿದ್ದಾಳೆ.

Ad Widget . Ad Widget .

ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಯೋಜನಾಧಿಕಾರಿಯೊಬ್ಬರ ಪರ್ಸ್ ಅನ್ನು ಮಹಿಳೆಯೊಬ್ಬರು ಕಳವು ಮಾಡಿರುವ ದೃಶ್ಯ ಸಿಸಿ ಕಳವು ಪ್ರಕರಣಕ್ಕೆ ಕ್ಯಾಮರದಲ್ಲಿ ಸೆರೆಯಾಗಿದೆ.

Ad Widget . Ad Widget .

ಕಳವು ಸಂಬಂಧಿಸಿ ಯೋಜನಾಧಿಕಾರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ನಡುವೆ ಬಸ್‌ನಲ್ಲಿ ವೃದ್ಧ ಮಹಿಳೆಯೊಬ್ಬರು ಅವರ ಪರ್ಸ್ ಅನ್ನು ಕಳವು ಮಾಡುವ ದೃಶ್ಯ ಬಸ್‌ನಲ್ಲಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದಲ್ಲದೆ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇಂದು ಬೆಳಿಗ್ಗೆ ಮಂಗಳೂರಿನಿ‌ಂದ ಉಪ್ಪಿನಂಗಡಿಗೆ ಹೊರಟಿದ್ದ ಸೆಲಿನಾ ಬಸ್ ನಲ್ಲಿ ಅದೇ ಅಜ್ಜಿ ಹೊರಟಿರುವುದನ್ನು ಕಂಡ ನಿರ್ವಾಹಕ ಸಂದೀಪ್ ಅವರು ,ನಿನ್ನೆ ಘಟನೆ ನಡೆದಿದ್ದ ಮಹೇಶ್ ಬಸ್ಸಿನ‌ ಚಾಲಕ ರೋಶನ್ ಅವರಿಗೆ ಕರೆ ಮಾಡಿ ಖಚಿತಪಡಿಸಿದ್ದರು.

ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ಬಿ.ಸಿ.ರೋಡಿನಲ್ಲಿ ಪೊಲೀಸರೂ ಸಿದ್ಧರಾಗಿದ್ದರು. ಈ‌ ನಡುವೆ ವಿಷಯ ಅರಿತ ವೃದ್ಧೆ ಪಡೀಲ್ ನಲ್ಲಿ ಬಸ್ಸಿನಿಂದ ಇಳಿಯಲು ಯತ್ನಿಸಿದ್ದು, ನಿರ್ವಾಹಕ ಮತ್ತು ಚಾಲಕ ತಡೆದಿದ್ದಾರೆ.

ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ಪುತ್ತೂರು ಪೊಲೀಸರ ನಿರ್ದೇಶನದಂತೆ ಆ ವೃದ್ಧೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

Leave a Comment

Your email address will not be published. Required fields are marked *