Ad Widget .

ತಾಜ್ ಮಹಲ್ ನಲ್ಲಿ ಮಂಗಗಳ ಹಾವಳಿ; ಪ್ರವಾಸಿಗರ  ಮೇಲೆ ದಾಳಿ

ಆಗ್ರಾ : ತಾಜ್​ಮಹಲ್​ನಲ್ಲಿ ಮಂಗಳ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು, ಇತ್ತೀಚೆಗೆ ತಾಜ್ ಮಹಲ್ ನೋಡಲು ಬಂದಿದ್ದ ಸ್ಪೇನ್ ಮಹಿಳೆಯ ಮೇಲೆ ಮಂಗಗಳು ದಾಳಿ ನಡೆಸಿದ್ದವು.

Ad Widget . Ad Widget .

ಇಂದು ತಾಜ್​ಮಹಲ್​ನ ಈಸ್ಟ್ ಗೇಟ್‌ನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಮಂಗಗಳು ದಾಳಿ ಮಾಡಿವೆ.

Ad Widget . Ad Widget .

ಮಂಗಗಳ ಗುಂಪೊಂದು ಈಸ್ಟ್ ಗೇಟ್‌ನಲ್ಲಿ ಟಿಕೆಟ್​ಗಾಗಿ ನಿಂತಿದ್ದ ಸ್ಪ್ಯಾನಿಷ್ ಪ್ರವಾಸಿ ಯುವತಿ ಕ್ರಿಸ್ಟಿನಾ ಮೇಲೆ ದಾಳಿ ಮಾಡಿವೆ.

ಕೂಡಲೇ ಅವರರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಟಿಕೆಟ್​ ಪಡೆಯಲು ಕ್ರಿಸ್ಟಿನಾ ನಿಂತಿದ್ದಾಗ ಸುತ್ತುವರೆದ ಮಂಗಗಳು ದಾಳಿ ಮಾಡಿವೆ.

ಈ ವೇಳೆಗೆ ಕ್ರಿಸ್ಟಿನ ಕೆಳಗೆ ಬಿದ್ದಿದ್ದಾರೆ. ಆಗ ಮಂಗಗಳು ಪರಚಿ ಮತ್ತು ಕಚ್ಚಿ ಗಾಯಮಾಡಿವೆ. ಆಸ್ಪತ್ರೆಯಲ್ಲಿ ಆ್ಯಂಟಿ ರೇಬಿಸ್ ಇಂಜೆಕ್ಷನನ್ನು ಕ್ರಿಸ್ಟಿನಾಗೆ ನೀಡಲಾಗಿದೆ.

Leave a Comment

Your email address will not be published. Required fields are marked *