Ad Widget .

ವಿಟ್ಲ: ನಿರ್ಜನ ಪ್ರದೇಶದಲ್ಲಿ ಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿಯರು

ಸಮಗ್ರ‌ ನ್ಯೂಸ್:‌ ನಿರ್ಜನ ಪ್ರದೇಶದಲ್ಲಿ ಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿಯರು ಪತ್ತೆಯಾದ ಘಟನೆ
ಕುಡ್ತಮುಗೇರು ಸಮೀಪದ ಪಡಾರು ಬೊಳ್ಪಾದೆ ಗುಡ್ಡದಲ್ಲಿ ನಡೆದಿದೆ.

Ad Widget . Ad Widget .

ಗುಡ್ಡ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರೊಂದಿಗೆ ಮುಸ್ಲಿಂ ಯುವಕನಿದ್ದು ಇದರಿಂದ ಸಾರ್ವಜನಿಕರು ಸಂಶಯಗೊಂಡಿದ್ದಾರೆ. ಮುಸ್ಲಿಂ ಯುವಕ ಕೆಲಸ ಕೊಡಿಸುವ ಆಮಿಷವೊಡ್ಡಿ ಇಲ್ಲಿಗೆ ಕರೆತಂದಿದ್ದಾಗಿ ತಿಳಿದುಬಂದಿದೆ. ಕೇರಳ ಮೂಲದವರು ಎಂದು ಕೂಡ ಹೇಳಲಾಗುತ್ತಿದೆ. ಇವರನ್ನು ಹಿಡಿದ ಅಲ್ಲಿನ ಸಾರ್ವಜನಿಕರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ.

Ad Widget . Ad Widget .

ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿಗೆ ಯಾಕಾಗಿ ಬಂದಿದ್ದಾರೆ.? ಯುವಕ ಯುವತಿಯರು ಯಾವ ಪ್ರದೇಶದವರು ಎಂಬುವುದು ವಿಚಾರಣೆ ವೇಳೆ ತಿಳಿದುಬರಬೇಕಿದೆ.

ಬೊಲ್ಪಾದೆ ಜನತಾ ಕಾಲೋನಿಯ ಆಯಿಶಾ ಮತ್ತು ಸಿದ್ದೀಕ್ ಎಂಬವರು ನಮ್ಮನ್ನು ಕರೆದಿದ್ದಾರೆಂದು ಭಿನ್ನ ಜೋಡಿಗಳು ಹೇಳಿವೆ. ಇದರಿಂದ ಸಂಶಯಗೊಂಡ ಹಿಂದೂ ಕಾರ್ಯಕರ್ತರು ವಿಟ್ಲ ಪೊಲೀಸರನ್ನು ಕರೆಯಿಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಬೊಲ್ಪಾದೆ ಜನತಾ ಕಾಲೋನಿಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಇದೇ ಆಯಿಶಾ-ಸಿದ್ಧೀಕ್ ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ಆಕ್ರೋಶದಿಂದ ಹೇಳುತ್ತಿದ್ದು ಪೊಲೀಸರು ಇಂತಹ ಸಮಾಜ ಘಾತುಕರನ್ನು ಸೂಕ್ತ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *