ಮೈಸೂರು; ಅ.1 ರಂದು‌ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ

ಮೈಸೂರು: ನಾಡಹಬ್ಬ ದಸರಾವನ್ನು ಈ ಬಾರಿ  ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ರೈತ ದಸರಾ ಅಂಗವಾಗಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

Ad Widget ... ..

ಅಕ್ಟೋಬರ್ 1ರಂದು ಜೆ.ಕೆ. ಮೈದಾನದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಗೋ ಪಾಲಕರು ಸೆಪ್ಟಂಬರ್ 29 ರಂದು ತಮ್ಮ ಹಸುಗಳೊಂದಿಗೆ ಆಗಮಿಸಿ ನೋಂದಾಯಿಸಬೇಕಾಗಿದೆ.

Ad Widget


ಸೆಪ್ಟೆಂಬರ್ 30 ಒಂದು ದಿನ ವಿಶ್ರಾಂತಿ ಇರಲಿದ್ದು, ಅಕ್ಟೋಬರ್ 1ರಂದು ಸ್ಪರ್ಧೆ ನಡೆಯಲಿದೆ.

ವಿಜೇತರಿಗೆ ಪ್ರಥಮ ಬಹುಮಾನ 50,000 ರೂಪಾಯಿ, ದ್ವಿತೀಯ ಬಹುಮಾನ 40,000 ರೂಪಾಯಿ, ತೃತೀಯ ಬಹುಮಾನ 30,000 ರೂಪಾಯಿ ಹಾಗೂ ಸಮಾಧಾನಕರ ಬಹುಮಾನವಾಗಿ 20,000 ರೂಪಾಯಿ ನೀಡಲಾಗುತ್ತದೆ.

Leave a Comment

Your email address will not be published. Required fields are marked *