ಹಾಫ್ ಹೆಲ್ಮೆಟ್ ಗೆ ಬೀಳಲಿದೆ ಫುಲ್‌ ದಂಡ| ಪೊಲೀಸರಿಗೂ ಹಾಕಲಾಗುತ್ತೆ ಫೈನ್!!

ಸಮಗ್ರ ನ್ಯೂಸ್: ಬೈಕ್ ಸವಾರರಿಗೆ ಹಾಫ್ ಹೆಲ್ಮೆಟ್​ನಿಂದ ಅಪಾಯದ ಹಿನ್ನಲೆ, ಮೊದಲು ಪೊಲೀಸರಿಂದ ಪೊಲೀಸರಿಗೇ ಜಾಗೃತಿ ಮೂಡಿಸಲು ಹಿರಿಯ ಸಂಚಾರಿ ಅಧಿಕಾರಿಗಳು ಮುಂದಾಗಿದ್ದಾರೆ. ಮೊದಲ ಹಂತವಾಗಿ ಹಾಫ್ ಹೆಲ್ಮೆಟ್ ಧರಿಸುವ ಪೊಲೀಸರಿಗೆ ದಂಡ ಹಾಕಲು ಸಂಚಾರಿ ವಿಭಾಗದ ಮುಖ್ಯಸ್ಥ ರವಿಕಾಂತೇಗೌಡ ಟ್ರಾಫಿಕ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

Ad Widget ... ..

ಜನ ಸಾಮಾನ್ಯರಿಗೆ ಬುದ್ಧಿ ಹೇಳುವ ಆರಕ್ಷಕರು ತಪ್ಪು ಮಾಡಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅರ್ಧ ಹೆಲ್ಮೆಟ್ ಧರಿಸಿ ಗಾಡಿ ಚಲಾಯಿಸಿ ಅಪಘಾತ ಆದ ಸಂದರ್ಭದಲ್ಲಿ ತಲೆ, ಮುಖದ ಭಾಗಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಹೀಗಾಗಿ ಐಎಸ್​ಐ ಮಾರ್ಕ್ ಇರುವ ಹಾಗೂ ಗಡ್ಡ, ಕೆನ್ನೆ, ತಲೆ ಪೂರ್ತಿ ಕವರ್ ಆಗುವಂತಹ ಪೂರ್ಣ ಹೆಲ್ಮೆಟ್ ಧರಿಸ ಬೇಕು. ಈ ಅರಿವು ಮೂಡಿಸಲು ದಂಡ ವಿಧಿಸೋಕೆ ಕಂಟ್ರೋಲ್ ರೂಂನಿಂದ ಎಲ್ಲಾ ಸಿಬ್ಬಂದಿಗೆ ಸಂದೇಶ ನೀಡಲಾಗಿದೆ.

Ad Widget

Leave a Comment

Your email address will not be published. Required fields are marked *