Ad Widget .

ಸುಳ್ಯ: ಸರ್ಕಾರಿ ಜಾಗ ಅತಿಕ್ರಮಣಕ್ಕೆ ಯತ್ನ..! ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ|

ಸಮಗ್ರ ನ್ಯೂಸ್: ಸರಕಾರಿ ಜಾಗವನ್ನು ಅತಿಕ್ರಮಣಕ್ಕೆ ಯತ್ನಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವ ಘಟನೆ ಸುಳ್ಯ ನಗರದ ಜಯನಗರ ಎಂಬಲ್ಲಿ ನಡೆದಿದೆ.

Ad Widget . Ad Widget .

ಜಯನಗರದ ಸರಕಾರಿ ಶಾಲೆಯ ಸಮೀಪ ಗೋಪಾಲ್ ನಾಯಕ್ ಎಂಬವರಿಗೆ ವಾಸಿಸಲು ಮನೆ ಮತ್ತು ಖಾಲಿ ಜಾಗವಿದ್ದರೂ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲು ಸೆ.16 ರಂದು ಜೆ.ಸಿ.ಬಿ ತರಿಸಿ ಕೆಲಸ ಪ್ರಾರಂಭಿಸಿದ್ದರು. ಈ ವೇಳೆ ಸ್ಥಳೀಯರಾದ ಹಸೈನಾರ್ ಜಯನಗರ ಎಂಬವರು ಇದನ್ನು ತಡೆ ಹಿಡಿದು, ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ವಿ.ಎ ಮತ್ತು ನ.ಪಂ. ಮುಖ್ಯಾಧಿಕಾರಿ ಕೂಡ ಸ್ಥಳಕ್ಕೆ ಬಂದು ಕೆಲಸ ಮಾಡದಂತೆ ಸೂಚಿಸಿದ್ದರು.

Ad Widget . Ad Widget .

ಸೆ.17ರಂದು ನ.ಪಂ. ಅಧ್ಯಕ್ಷ ವಿನಯಕುಮಾರ್ ‌ಕಂದಡ್ಕ ಮತ್ತು ಸ್ಥಳೀಯ ನ.ಪಂ ಸದಸ್ಯರೊಂದಿಗೆ ಅದೇ ಜಾಗಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಹಸೈನಾರ್ ರವರು ಘಟನೆ ಬಗ್ಗೆ ಪ್ರಶ್ನಿಸಿದಾಗ ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ. ಬಳಿಕ ಹಸೈನಾರ್ ಮತ್ತು ನ.ಪಂ ಅಧ್ಯಕ್ಷರ ನಡುವೆ ಮಾತಿನ ಚಕಮಕಿವೂ ನಡೆದಿತ್ತು.

ಈ ಬಗ್ಗೆ ವಿಷಯ ತಿಳಿದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಪಾಟಾಜೆ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ಈ ರೀತಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದವರಿಗೆ ಹೈಕೋರ್ಟ್ ಆದೇಶದಂತೆ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ಎಂಬ ನಿಯಮ ವಿದ್ದರೂ ಇಲ್ಲಿ ಆ ತರಹದ ಯಾವುದೇ ಘಟನೆ ನಡೆಯಲಿಲ್ಲ. ಒತ್ತುವರಿ ಮಾಡಲು ಯತ್ನಿಸಿದವರ ಮೇಲೆ ತಕ್ಷಣ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನೆರಡು ದಿನಗಳಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತಾ.ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

ಸುಳ್ಯ ನ.ಪಂ ವ್ಯಾಪ್ತಿಯಲ್ಲಿ ಮನೆ ನಿವೇಶನ ಇಲ್ಲದ ಎಷ್ಟೋ ಮಂದಿ ನ.ಪಂ.ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಹೀಗಿರುವಾಗ ಅರ್ಜಿದಾರರಿಗೆ ಮೊದಲು ಜಾಗ ಕೊಡುವ ಬದಲು ಜಾಗ,ಮನೆ ಸೌಕರ್ಯ ಇರುವವರಿಗೆ ಮತ್ತೆ ಮತ್ತೆ ಅವಕಾಶ ಕೊಡುವುದು ಸರಿಯಲ್ಲ, ಅದೇ ರೀತಿ ಮನೆ ನಿವೇಶನಕ್ಕೆ ನ,ಪಂ ನಲ್ಲಿ ದಳಿತರು ಹಾಕಿರುವ ಅರ್ಜಿಯನ್ನು ತಕ್ಷಣ ಪರಿಶೀಲಿಸಿ ಅವರಿಗೆ ಮನೆಯನ್ನು ಒದಗಿಸಿ ಕೊಡಬೇಕಾಗಿದೆ. ಅದೇ ರೀತಿ ಈ ಅತಕ್ರಮಣ ನಡೆದ ಜಾಗದಲ್ಲಿ ಮತ್ತೆ ಕೆಲಸ ಮುಂದುವರೆಸಿದರೆ ಎಲ್ಲರೂ ಸೇರಿ ಸರಕಾರಿ ಜಾಗದಲ್ಲಿ ಇದೇ ರೀತಿ ಮನೆ ಕಟ್ಟುವಂತಹ ಕೆಲಸವನ್ನು ನಾವು ಕೂಡ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವೀಡಿಯೊ ಲಿಂಕ್:

https://m.facebook.com/story.php?story_fbid=pfbid02ht5UzjPdqCLFhgBRAvryMZ91LS9gQGQV2PiEKRTC6T7RHsjgpaRQTgWZ7gHyD12tl&id=100083341387297&sfnsn=mo

ಹೈಕೋರ್ಟ್ ನಿಯಮದಲ್ಲಿ ಏನಿದೆ?:
ಕಾನೂನು ಬಾಹಿರವಾಗಿ ಎಲ್ಲೆಂದರಲ್ಲಿ ಸರ್ಕಾರಿ ಜಮೀನು, ಜಾಗ, ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆಯುತ್ತಲೇ ಇದೆ. ಆದರೆ ಇದಕ್ಕೆಲ್ಲಾ ಕಡಿವಾಣ ಬೀಳುವ ಸಮಯ ಹತ್ತಿರ ಬಂದಿದ್ದು, ಹೀಗೆ ಅತಿಕ್ರಮಣ ಮಾಡಿಕೊಂಡು ಅಕ್ರಮ ಚಟುವಟಿಕೆಗಳನ್ನು ಮಾಡುವುದನ್ನು ತಡೆಗಟ್ಟವ ಸಲುವಾಗಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಸೆಕ್ಷೆನ್ 193(ಎ) ಪ್ರಕಾರ ಸರ್ಕಾರದ ಭೂಮಿಯನ್ನು ಕಬಳಿಕೆಯ ಮಾಡುವ ಉದ್ದೇಶದಿಂದ ಯಾವುದೇ ಸರ್ಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಪ್ರವೇಶಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು ಅಪರಾಧ. ಹೀಗೆ ಮಾಡಿದವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 50ಸಾವಿರ ದಂಡ ವಿಧಿಸಬಹುದು ಎಂದು ತಿಳಿಸಿದೆ.

ಇಷ್ಟೆಲ್ಲ ನಿಯಮಗಳು ಇದ್ದರೂ ಈ ಘಟನೆಯಲ್ಲಿ ಮಾತ್ರ ಅಧಿಕಾರಿಗಳು ಯಾಕೆ ಸುಮ್ಮನೆ ಕುಳಿತಿದ್ದಾರೆ ಎನ್ನುವುದೇ ಸ್ಥಳೀಯರಲ್ಲಿ ಪ್ರಶ್ನೆ ಎದುರಾಗಿದೆ. ಬೇರೆಯವರು ಈ ಕೆಲಸ ಮಾಡಿದಲ್ಲಿ ಅವರಿಗೆ ತಕ್ಕ ಶಿಕ್ಷೆ ಯಾಗುತ್ತಿರಲಿಲ್ಲವೇ. ಅದಲ್ಲದೆ ಈ ಕಾರ್ಯದಲ್ಲಿ ಅಧಿಕಾರಿಗಳು, ನ.ಪಂ. ಕೂಡ ಶಾಮೀಲು ಆಗಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.

Leave a Comment

Your email address will not be published. Required fields are marked *