Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Ad Widget . Ad Widget .

ಮೇಷ:
ಮೇಷ ರಾಶಿಯಲ್ಲಿ ಜನಿಸಿದವರಿಗೆ ರಾವಣನ ಪತ್ನಿ ಮಂಡೋದರಿಯ ಜೀವನವೇ ಹೇಗಿರಬೇಕೆಂದು ತೋರುತ್ತದೆ. ಸ್ಪುರದ್ರೂಪಿ, ದೈವಭಕ್ತೆ, ರಾಕ್ಷಸನ ಮಡದಿಯಾದರೂ ಮಾನವ ಗುಣಗಳನ್ನು ಹೊಂದಿದ್ದ ಮಹಾ ಪತಿವ್ರತೆಯರ ಸಾಲಲ್ಲಿ ನಿಲ್ಲುತ್ತಾರೆ. ಕುಲಗುರುಗಳು ಹೇಳಿದ ಮಾತನ್ನು ಕೇಳಬೇಕು. ಖರ್ಚನ್ನು ನಿಭಾಯಿಸಿ ಮನಸ್ಸು ಭಾರವಾಗಿದೆ. ಮುಂದೆ ಇದರ ಪರಿಣಾಮ ನಿಮಗೆ ತಿಳಿಯುತ್ತದೆ. ರಾಜಾಧಿರಾಜ ಮಹಾರಾಜನ ಪೋಷಾಕು ಧರಿಸಿರುವ ಸುಬ್ರಹ್ಮಣ್ಯನನ್ನು ಪೂಜಿಸಿ.

Ad Widget . Ad Widget .

ವೃಷಭ:
ಲೋಕವೆಲ್ಲ ಹುಡುಕಿದರೂ ಚಿಂತೆ ಇಲ್ಲದವನಿಲ್ಲ. ಚೆಂತೆ ಇದ್ದಲ್ಲಿ ಜೀವಂತವಾಗಿಯೇ ನಿತ್ಯವೂ ದಹಿಸುತ್ತದೆ. ಚಿಂತೆಯನ್ನು ಬಿಟ್ಟು ದೂರ ಸಾಗಿ. ಏಕಾದಶ ಗುರುವು ನಿಮ್ಮ ನ್ಯಾಯ, ಧರ್ಮ ಸತ್ಯದ ಬೇಡಿಕೆಗಳನ್ನು ಈಡೇರಿಸುತ್ತಾನೆ. ದೇವರ ನಾಮಸ್ಮರಣೆಯೇ ಬಹುಮುಖ್ಯ. ಆಸೆ-ಮಾಯಾ ಮೋಹವನ್ನು ಬಿಟ್ಟರೆ ಜನವರಿ 17, 2023ರ ನಂತರ ಶನಿಯು ನಿಮ್ಮನ್ನು ಮುಂದೆ ನಡೆಸುತ್ತಾನೆ. ಎಚ್ಚರದಿಂದ ಹೆಜ್ಜೆ ಇರಿಸಿ. ನಂಜನಗೂಡಿನಲ್ಲಿರುವ ಪ್ರತ್ಯಂಗಿರಾ ದೇವಿಯನ್ನು ಪೂಜಿಸಿ ಬನ್ನಿ.

ಮಿಥುನ:
ಸ್ವಾಭಾವಿಕವಾಗಿ ತುಂಬಾ ಮೃದುವಾದ ವ್ಯಕ್ತಿಗಳು. ಕಾಲ ಮಾನದಂಡದಲ್ಲಿ ನಿಮ್ಮ ಹೆಜ್ಜೆಯು ಕಾಲಕ್ಕೆ ತಕ್ಕಂತೆ ಸಾಗಲಾಗುತ್ತಿಲ್ಲ. ದಶಮ ಗುರು ಅಲ್ಪವನ್ನು ನೀಡಿದರೂ ಮಾರ್ಗವನ್ನು ಸೂಚಿಸುತ್ತಾನೆ. ಗಣಪತಿಯನ್ನು ಪೂಜಿಸಿ ಸತ್ಯಗಣಪತಿ ವ್ರತವನ್ನು ಮಾಡಿ. ಉತ್ತಮ ಫಲವನ್ನು ಹೊಂದಿರಿ. ಅತಿ ಆಯಾಸದ ಕಷ್ಟ-ಕಾರ್ಪಣ್ಯ ತಂದುಕೊಳ್ಳಬೇಡಿ. ಬ್ರಹ್ಮನ ಬರಹದಲ್ಲಿ ಏಕಾದಶಕ್ಕೆ ಗುರು ಬಂದಾಗ ಎಲ್ಲವನ್ನೂ ತಂದುಕೊಡುತ್ತಾನೆ.

ಕಟಕ:
ಚಂದ್ರನ ಮನೆಯಲ್ಲಿ ಜನಿಸಿದವರಿಗೆ 9ನೇ ಮನೆಯಲ್ಲಿ ಗುರುವಿರುವುದು ಮಹಾಪುಣ್ಯಂಶವೇ ಎಂದು ಅರ್ಥೈಸಿಕೊಳ್ಳಬೇಕು. ಗರುಡಪಕ್ಷಿಯ ಭಕ್ತಿ ಮಹಾವಿಷ್ಣುವಿಗೆ ಮಾತ್ರವೇ. ದೈವದಲ್ಲಿ ಶ್ರದ್ಧೆಯನ್ನು ಇರಿಸಿ ಕುಲಗುರುಗಳು, ಜನ್ಮದಾತರಿಗೆ ಪೂಜಿಸಿ. ಕಪಟ ಮೋಸಗಳಿಗೆ ಒಳಗಾಗದೆ ಶುದ್ಧಾತ್ಮರೂ ವಿಚಾರ-ವಿಷಯ ಆಸಕ್ತಿ ಇಲ್ಲದವರು, ಬ್ರಹ್ಮಚಾರಿಗಳು ವ್ಯಾಸಸ್ವರೂಪ ಹೊಂದಿರುವ ಗುರುಗಳಿಗೆ ವಂದಿಸಿದರೆ ನೀವು ಸುಖವಾಗಿರುತ್ತೀರಿ. ಶಿವ ಪಂಚಾಕ್ಷರಿ ಸ್ತೋತ್ರ ಪಠಿಸಿ.

ಸಿಂಹ:
ದೇವಾನುದೇವತೆಗಳಿಗೆ ಒಡೆಯನು, ಇಂದ್ರ-ಬ್ರಹ್ಮ-ಪಾತಾಳ ಲೋಕಗಳನ್ನು ಕಲ್ಪಿಸಿದ ಶ್ರೀರಾಮಚಂದ್ರನು ವನವಾಸವನ್ನು ಮಾಡಲೇಬೇಕಾಯಿತು. ಸಿಂಹ ರಾಶಿಯಲ್ಲಿ ಜನಿಸಿದವರು, ಗೋಂಡಾರಣ್ಯದಲ್ಲಿ ಬಿಟ್ಟರೂ, ಅಲ್ಲಿಯೂ ಜೀವನವನ್ನು ಸಂಭಾಳಿಸುವ ಶಕ್ತಿ ಅವರಿಗೆ ಇದೆ. ಅಂದರೆ ಶ್ರೀರಾಮನ ಅನುಗ್ರಹವು ಸಿಂಹ ರಾಶಿಗೆ ಸದಾಕಾಲವೂ ಇರುತ್ತದೆ. ಮಾಡುವ ಕೆಲಸದಲ್ಲಿ ದೈವಭಕ್ತಿ, ತ್ಯಾಗ, ಉಲ್ಲಾಸಿತ ಮನಸ್ಸು ಇರಬೇಕು. ಧೈರ್ಯದಿಂದ ಸಾಗಿ. ಸೂರ್ಯನಾರಾಯಣನ ಪ್ರಾರ್ಥನೆಯಿರಲಿ.

ಕನ್ಯಾ:
ಮನೆಗೆ ಬಂದವರನ್ನು ಸತ್ಕರಿಸಿ, ಬಂದ ಕಾರಣ ಕೇಳಿ ಅವರನ್ನು ಸಂತೈಸಿ ಸಂತೋಷದಿಂದ ಕಳಿಸಿಕೊಡುವುದು ಮಾನವ ಧರ್ಮ. ಬೇಕಾದಾಗ ಉಪಯೋಗಿಸಿಕೊಂಡು ಬೇಡವಾದಾಗ ಅವರನ್ನು ಬಿಸಾಡಿದರೆ ದೇವರು ನೋಡುತ್ತಿರುತ್ತಾನೆ. ಅದರಿಂದ ಶಾಪವೇ ಹೊರತು ಅದಕ್ಕೆ ಪರ್ಯಾಯವಿರದು. ಎಚ್ಚರಿಕೆಯಿಂದ ಬಂಧುಗಳು ಸ್ನೇಹಿತರೊಂದಿಗೆ ಸಾಗಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಲು ಯತ್ನಿಸಿ. ಮನೋರೋಗ ನಿಮ್ಮನ್ನು ಕಾಡುತ್ತಿದೆ. ಕೃಷ್ಣಾಷ್ಟೋತ್ತರ ಪಠಿಸಿ.

ತುಲಾ:
ನಿಮ್ಮ ಪೂರ್ವಪುಣ್ಯದಿಂದ ಯಾವ ಗ್ರಹವೂ ಗ್ರಹಚಾರವೂ ಬಾಧಿಸದು. ಕೈಗೆ ಎಟುಕದ ವಿಚಾರ ಕೂಡ ನಿಮ್ಮಂತೆ ಇದ್ದು, ಹರ್ಷವನ್ನು ತರುತ್ತದೆ. ನಿಮ್ಮ ಪರಿಶ್ರಮಕ್ಕೆ ಜ್ಞಾನಕ್ಕೆ ಜನರು ತಲೆದೂಗುತ್ತಾರೆ. ಜನ್ಮಕೊಟ್ಟವರು ನಿಮ್ಮನ್ನು ದೇವರು ಕೊಟ್ಟ ವರವೆಂದು ಭಾವಿಸಿ ಹರಸುತ್ತಾರೆ. ಖರ್ಚು-ವೆಚ್ಚ ತಗ್ಗಿಸಿ. ಮರೆಯದೆ ಶನಿಅಷ್ಟೋತ್ತರ ಪಠಿಸಿ ಬಿಲ್ವದಿಂದ ಶಿವನನ್ನು ಪೂಜಿಸಿ. ಕನ್ಯಾ-ಸಿಂಹ-ತುಲಾ ರಾಶಿಯವರು ಪಿತೃಗಳಿಗೆ ಶ್ರದ್ಧೆಯಿಂದ ನಮಸ್ಕರಿಸಿದರೆ ಏನನ್ನು ಬೇಕಾದರೂ ಪಡೆಯಬಹುದು.

ಧನುಸ್ಸು:
ಧನುರ್ ರಾಶಿಯವರಿಗೆ ಧನವು, ಮನಸ್ಸಿನ ಯೋಗವು ಶ್ರೀರಾಮನ ಕೃಪೆಯಿಂದ ಬಂದು ಸೇರಲಿದೆ. ಮಾಯಾಸ್ವರೂಪಿ ಮನುಷ್ಯನು ಹೇಗಿರಬೇಕೆಂದು ತೋರಿಸಿದ ಶ್ರೀರಾಮಚಂದ್ರನೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದ್ದಾನೆ. ಜನವರಿ 17, 2023ರವರೆಗೂ ಕಾದಿರಿ. ತಲೆಯು-ಹೊಟ್ಟೆಯು ಎರಡೂ ಕಸದ ಬುಟ್ಟಿಯಲ್ಲ. ಯಾರು ಏನೇ ಹೇಳಿದರೂ ದೈವಕೃಪೆಯು ನಿಮ್ಮ ಮೇಲೆ ಇದ್ದು ನಿಮಗೆ ಅಗ್ರಸ್ಥಾನ ಕೊಟ್ಟು ಅಧಿಕಾರವನ್ನು ನಿಮ್ಮದಾಗುವರೆಗೆ ಕಾದಿರಿ. ಗುರುಚರಿತ್ರೆಯನ್ನು ತಪ್ಪದೆ ಓದಿ.

ವೃಶ್ಚಿಕ:
ಗಾಳಿ ಬಂದಾಗ ತೂರಿಕೊಳ್ಳು ಎಂಬಂತೆ ನಿಮ್ಮ ಗಮನವು ಅವಕಾಶಗಳ ಮೇಲಿರಲಿ. ಅನ್ಯ ವಿಚಾರಗಳಿಗೆ ಗಮನ ಕೊಡದೆ ಏಕಾಗ್ರತೆ, ಏಕದೃಷ್ಟಿ ಇರಲಿ. ಅತ್ಯಂತ ಪ್ರಮುಖವಾದ ಒಂದೇ ಒಂದು ವಿಷಯವೆಂದರೆ ದುಡ್ಡು. ಇದರ ಕಡೆ ಗಮನ ಕೊಟ್ಟು ಸಾಗಿದರೆ ನಿಮ್ಮ ದುಡ್ಡು ನಿಮ್ಮ ಕೈಸೇರಿ ಧನದ ಕೊರತೆ ನೀಗುತ್ತದೆ. ಧನ್ವಂತರಿ ಅಷ್ಟೋತ್ತರ ಪಾರಾಯಣ ಮಾಡಿ. ರಾಶ್ಯಾಧಿಪತಿ ಸುಬ್ರಹ್ಮಣ್ಯನನ್ನು ಎಂದೂ ಮರೆಯದಿರಿ. ಅವನನ್ನು ಪೂಜಿಸಿ.

ಮಕರ:
ಮಕರ ರಾಶಿಯವರಿಗೆ ಜನ್ಮ ಶನಿಯು ಮುಂದೆ ಸಾಗಲಿದ್ದಾನೆ. ಓಡಿ ಗೆಲ್ಲಬೇಕೆಂದು ಸ್ವಲ್ಪ ಮುಂಚಿತವಾಗಿಯೇ ಓಡಿದರೆ ಪ್ರಯಾಸವಾಗುತ್ತದೆ. ಇನ್ನು 3 ತಿಂಗಳು ನಿಧಾನವಾಗಿ ಸಾಗಿ. ನಿಮಗೆ ಪಾಠ ಕಲಿಸಿದ ಶನಿ ಮಹಾರಾಜ ಇನ್ನು ಮುಂದೆ ಪ್ರಗತಿಯನ್ನು ನೀಡಿ ಹರಸುತ್ತಾನೆ. ನಿಮ್ಮ ದೈವಭಕ್ತಿ ಮುಂದುವರಿಸಿ. ಭಗವಂತ ನೀಡಿದ್ದನ್ನು ಬೇರೆಯವರಿಗೂ ಹಂಚಿ ನೀವೂ ತಿಂದು ತೃಪ್ತರಾಗಿರಿ.

ಕುಂಭ:
ಶನಿಯು ದ್ವಾದಶದಲ್ಲಿ ಇದ್ದಾಗ್ಯೂ ಸಹ ಕುಸ್ಥಾನದಲ್ಲಿ ಗುರುವೇ ಕೂತಿದ್ದಾನೆ. ಸ್ವಕ್ಷೇತ್ರದಲ್ಲಿ ಗುರುವಿರುವುದರಿಂದ ಪೀಠಾಪುರದಲ್ಲಿರುವ ದತ್ತಾತ್ರೇಯನನ್ನು ಪೂಜಿಸಿ ಬಂದೂ, ತ್ರಿವಿಕ್ರಮ ಮಹಾಮುನಿಗೆ ವಿಶ್ವರೂಪವನ್ನು ತೋರಿದ ಕುಮಸಿ ಕ್ಷೇತ್ರವನ್ನು ದರ್ಶಿಸಿ ಬನ್ನಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಶನಿಯ ದ್ವಾದಶದ ದೋಷವೂ ನಿವಾರಣೆಯಾಗುತ್ತದೆ.

ಮೀನ:
ಗೌತಮ ಮುನಿ ತಮ್ಮ ಮಂತ್ರ ಸಾಮರ್ಥ್ಯದಿಂದ ಬೆಳಗಿನ ತಪೋಶಕ್ತಿಯಿಂದ ಕಾಳನ್ನು ಬಿತ್ತಿ ಮಧ್ಯಾಹ್ನಕ್ಕೆ ಕಾಳನ್ನು ಪಡೆದು ಭಿಕ್ಷೆಯನ್ನು ಮಾಡುತ್ತಿದ್ದರು. ಅದು ಅವರ ತಪೋಬಲ, ಮನೋಬಲ ಉಂಟಾಗುವ ಕುಂದು-ಕೊರತೆಗಳು, ಆಯಾಸವಾದ ಮನಸ್ಸು, ಜಡವಾದ ದೇಹವನ್ನು ಬಿಟ್ಟು ವೇಗದಲ್ಲಿ ಸಾಗಿ. ವಿಜಯಪುರದ ಎಲಗೂರು ಹನುಮಂತನನ್ನು ಪೂಜಿಸಿ. ನಿಮ್ಮನ್ನು ಕಾಪಾಡುತ್ತಾನೆ. ಹನುಮಾನ್ ಚಾಲೀಸಾವನ್ನು, ಆಂಜನೇಯ ಅಷ್ಟೋತ್ತರವನ್ನು ನಿತ್ಯವೂ ಮುಂಜಾನೆ, ಸಂಜೆ ಪಠಿಸಿ.

Leave a Comment

Your email address will not be published. Required fields are marked *