ಚಿಕ್ಕಮಗಳೂರು: ಮೆಟ್ಟಿಲು ಹತ್ತಲಾರದೇ ವಿಶೇಷಚೇತನ ಯುವಕ ಪರದಾಟ| ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರಿಸಲು ಸ್ಥಳೀಯರ ಆಗ್ರಹ

ಸಮಗ್ರ ನ್ಯೂಸ್: ಸಬ್ ರಿಜಿಸ್ಟರ್ ಕಚೇರಿ ಮೆಟ್ಟಿಲು ಹತ್ತಲಾರದೇ ವಿಶೇಷ ಚೇತನ ಯುವಕ ಪರದಾಟ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿ ಬಳಿ ಘಟನೆ ನಡೆದಿದ್ದು ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget ... ..

ನಗರದ ಕೆಂಪನಹಳ್ಳಿ ನಿವಾಸಿ ಸಚಿನ್ ಪರದಾಡಿದ ಯುವಕ. ಈತ ತನ್ನ ಕಾರ್ಯದ ನಿಮಿತ್ತ ಸಬ್ ರಿಜಿಸ್ಟರ್ ಕಚೇರಿಗೆ ಬಂದಿದ್ದಾನೆ. ಅದರೆ ಕಚೇರಿ ಮೊದಲ ಮಹಡಿಯಲ್ಲಿ ಇರುವುದರಿಂದ ಮೆಟ್ಟಿಲು ಹತ್ತುವ ಅನಿವಾರ್ಯವಿತ್ತು. ಆದರೂ ಯುವಕ ಪರದಾಡಿಕೊಂಡು ಕಚೇರಿಯನ್ನು ತಲುಪಿದ್ದಾನೆ.

Ad Widget

ಹಾಗಾಗಿ ಇದೇ ರೀತಿ ಇನ್ನೆಷ್ಟು ಜನ ವಿಶೇಷಚೇತನ ಯುವಕ, ಯುವತಿಯರು ಹಾಗೇ ವೃದ್ಧರು ಪರದಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಲ್ಲದೆ, ಸಬ್ ರಿಜಿಸ್ಟರ್ ಕಚೇರಿಯನ್ನು ಗ್ರೌಂಡ್ ಪ್ಲೋರ್ ಗೆ ಸ್ಥಳಾಂತರಿಸಲು ಸ್ಥಳಿಯರ ಆಗ್ರಹಿಸಿದ್ದಾರೆ.

https://m.facebook.com/story.php?story_fbid=pfbid0qk974J4e8qnZ1NDoCBoUeAURM2TCFpoLATFi2ALuYHpPT5PEDmJD46xQu5sGgN4kl&id=100061955421424

Leave a Comment

Your email address will not be published. Required fields are marked *