Ad Widget .

ಕೊಟ್ಟಿಗೆಹಾರ: ಮಗಳ ನಿಶ್ಚಿತಾರ್ಥಕ್ಕೆ ಮನೆಯಲ್ಲಿ ಸಾಕಿದ್ದ ಹಸುವನ್ನೇ ಮಾಂಸಕ್ಕಾಗಿ ಹತ್ಯೆ| ಇಬ್ಬರ ಬಂಧನ

ಸಮಗ್ರ ನ್ಯೂಸ್: ಮಗಳ ನಿಶ್ಚಿತಾರ್ಥಕ್ಕೆ ಮನೆಯಲ್ಲಿ ಸಾಕಿದ್ದ ಹಸುವನ್ನೇ ಮಾಂಸಕ್ಕಾಗಿ ಹತ್ಯೆ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ಈಚಿಕೆರೆ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಈಚಿಕೆರೆಯ ರೋಷನ್ ಎಂಬುವರ ಮನೆಯಲ್ಲಿ ಮಗಳ ನಿಶ್ಚಿತಾರ್ಥಕ್ಕೆ ಮನೆಯಲಿದ್ದ ಹಸುವನ್ನು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಈ ವೇಳೆ ಹತ್ಯೆ ಮಾಡಿದ ಹಸುವಿನ ಮಾಂಸ ಬೇರ್ಪಡಿಸುತ್ತಿದ್ದರ ಎನ್ನಲಾಗಿದೆ.

Ad Widget . Ad Widget .

ಈ ಸಂದರ್ಭ ಪೊಲೀಸರು ಇಬ್ಬರನ್ನು ವಶಕ್ಕೆ
ಪಡೆದಿದ್ದಾರೆ, ತಲೆಮರೆಸಿಕೊಂಡಿರೋ ಮೂವರಿಗಾಗಿ ಶೋಧ ನಡೆಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.

ಇನ್ನೂ ಚಿಕ್ಕಮಗಳೂರಿನ ಹಲವು ಕಡೆಗಳಲ್ಲಿ ಗೋ ಹತ್ಯೆ ಹೆಚ್ಚಾಗುತ್ತಿದ್ದು ನಾಗರೀಕ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಮನೆ ಮಾಡಿದ್ದು ,ಆಧುನಿಕ ಭಾರತದಲ್ಲಿ ಪ್ರೀತಿ-ವಾತ್ಸ್ಯಲಕ್ಕೆ ಬೆಲೆಯೇ ಇಲ್ಲದಂಥಾಗಿದೆ.

Leave a Comment

Your email address will not be published. Required fields are marked *