Ad Widget .

ಹುಣಸೂರು: ನಗರದ ಹಲವೆಡೆ ಕಳ್ಳತನ

ಸಮಗ್ರ ನ್ಯೂಸ್: ತಾಲೂಕಿನಲ್ಲಿ ಕಳ್ಳರು ಕೈಚಳಕ ಆರಂಭಿಸಿದ್ದು, ನಗರದ ಬಜಾರ್ ರಸ್ತೆಯ ಅಂಗಡಿ, ಬಾರ್‌ಗಳ ಬೀಗ ಮುರಿದು ಹಣಕ್ಕಾಗಿ ತಡಕಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದರೆ, ನಗರಕ್ಕೆ ಸಮೀಪದ ಬೆಳ್ತೂರಿನ ಐದು ಪಂಪ್ ಸೆಟ್‌ಗಳ ಕೇಬಲ್ ಕಳ್ಳತನವಾಗಿದೆ.

Ad Widget . Ad Widget .

ನಗರದ ಜನನಿಭಿಡ ಪ್ರದೇಶವಾದ ತಾ.ಪಂ.ಕಚೇರಿ ಮುಂಭಾಗದ ರೇಣುಕಾ ಬಾರ್ ಮತ್ತು ಬಜಾರ್ ರಸ್ತೆಯ ಚಾಮುಂಡೇಶ್ವರಿ ಬಾರ್ ಅಂಡ್ ರೆಸ್ಟೋರೆಂಟ್, ಟಿ.ಪಿ.ಸ್ಟೋರ್, ಇದರ ಪಕ್ಕದ ಟೀ ಅಂಗಡಿಗಳ ಬೀಗ ಒಡೆದ ಕಳ್ಳರು ಹಣಕಾಸಿಗಾಗಿ ತಡಕಾಡಿ ಬೀಡಿ-ಸಿಗರೇಟು, 800ರೂ. ಕದ್ದು ಪರಾರಿಯಾಗಿದ್ದರೆ,ಇನ್ನು ಕೃಷ್ಣಬೇಕರಿ ಬೀಗ ಒಡೆದು ಒಳಕ್ಕೆ ಹೋಗಲಾಗದೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

Ad Widget . Ad Widget .

ವಿಷಯ ತಿಳಿದ ಇನ್ಸ್ ಪೆಕ್ಟರ್ ಶ್ರೀನಿವಾಸ್, ಎಸ್.ಐ.ಲೋಕೇಶ್ ಸಿ.ಸಿ.ಕ್ಯಾಮರಾ ಪುಟೇಜ್ ಪರಿಶೀಲನೆ ನಡೆಸಿದ್ದಾರೆ.

ಐದು ಕಡೆ ಕೇಬಲ್ ಕಳ್ಳತನ:

ತಾಲೂಕಿನ ಕಸಬಾ ಹೋಬಳಿಯ ಬೆಳ್ತೂರು ಗ್ರಾಮದ ಗಜೇಂದ್ರ, ಬಸವರಾಜು, ಶಿವಲಿಂಗಾಚಾರಿ,ರಾಜೇಶ್, ಚಂದ್ರು ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ಬೋರ್‌ವೆಲ್‌ನ ಸಬ್ ಮರ್ಸಿಬಲ್ ಪಂಪ್ ಸೆಟ್‌ಗೆ ಅಳವಡಿಸಿದ್ದ ಸುಮಾರು 100 ಮೀಟರ್‌ನಷ್ಟು ಕೇಬಲ್ ಕಟ್ ಮಾಡಿ ಹೊತ್ತೊಯ್ದಿದ್ದಾರೆ.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸ್.ಐ ಜಮೀರ್ ಅಹಮದ್, ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Comment

Your email address will not be published. Required fields are marked *