ಗಾನ ಶಾರದೆ ಗಾಯನ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಸುಳ್ಯದ ತನ್ಮಯ್ ಗೆ ದ್ವಿತೀಯ ಬಹುಮಾನ

ಸಮಗ್ರ ನ್ಯೂಸ್:ಉಪ್ಪಿನಂಗಡಿಯ ರಾಮನಗರ ಗಾಣಿಗ ಸಮುದಾಯ ಭವನದಲ್ಲಿ ಆರ್ ಪಿ ಕ್ರಿಯೇಷನ್ಸ್ ಪಾಂಬಾರು ಆಯೋಜಿಸಿದ್ದ ಗಾನ ಶಾರದೆ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸುಳ್ಯದ ತನ್ಮಯ್ ಎಮ್ ಸೋಮಯಾಗಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾನೆ.

Ad Widget ... ..

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರಿನ ಶಾಸಕರಾದ ಶ್ರೀ ಸಂಜೀವ್ ಮತಂದೂರು ರವರು ವಹಿಸಿದ್ದರು. ಸುಳ್ಯದ ಖ್ಯಾತ ಸಾಹಿತಿ , ಗಾಯಕ ಮತ್ತು ಜ್ಯೋತಿಷಿ ಅಭಿನಂದನಾ ಭಾಷಣ ಮಾಡಿ ಬಹುಮಾನ ನೀಡಿ ಗೌರವಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆರ್ ಪಿ ಕ್ರಿಯೇಷನ್ ಅಧ್ಯಕ್ಷ ರವಿ ಪಾಂಬಾರ್ , ದಿಲೀಪ್ ಸುಳ್ಯ , ಖ್ಯಾತ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ , ಚಂದ್ರಶೇಖರ್ ಪುತ್ತೂರು , ಶಿವಾನಂದ್ ಶೆಣೈ , ಹರ್ಷಿತಾ ಸುಳ್ಯ , ಪದ್ಮರಾಜ್ ವಿಟ್ಲ ಇನ್ನಿತರರು ಉಪಸ್ಥಿತರಿದ್ದರು.

Ad Widget

ತನ್ಮಯ್ ಸಂತ ಜೋಸೆಫ್ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಮುಳ್ಯ ಅಟ್ಲೂರಿನಲ್ಲಿ ವಾಸವಾಗಿರುವ ಶ್ರೀಮತಿ ರಂಜಿನಿ ಮತ್ತು ವಿಕ್ರಮ್ ಸೋಮಯಾಗಿ ರವರ ಸುಪುತ್ರನಾಗಿದ್ದಾನೆ.

Leave a Comment

Your email address will not be published. Required fields are marked *