Ad Widget .

ಕಾಂಗ್ರೆಸ್ ಗೆ ಕೈ ಕೊಡ್ತಾರಾ ಮೋಹಕತಾರೆ ರಮ್ಯಾ? ಮಾಜಿ ಸಂಸದೆಯನ್ನು ಪಕ್ಷಕ್ಕೆ ಕರೆತರಲು ಬಿಜೆಪಿಯಿಂದ ನಡೀತಾ ಇದೆಯಾ ಪ್ಲ್ಯಾನ್?

ಸಮಗ್ರ ನ್ಯೂಸ್: ಮಂಡ್ಯದ ಮಾಜಿ ಸಂಸದೆ ರಮ್ಯಾ ಬಿಜೆಪಿ ಸೇರುತ್ತಾರೆಯೇ, ಈ ರೀತಿಯ ಪ್ರಶ್ನೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ಕಾಂಗ್ರೆಸ್ ವರಿಷ್ಟ ನಾಯಕರಿಂದ ಸೂಕ್ತ ಗೌರವ ಸಿಗದ ಕಾರಣ ರಮ್ಯಾ ಬಿಜೆಪಿಗೆ ಸೇರಿ ಅದೃಷ್ಟ ಪರೀಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

ಸಿನಿಮಾ ಮತ್ತು ರಾಜಕೀಯದಲ್ಲಿ ರಮ್ಯಾ ಗುರುತಿಸಿಕೊಂಡು ಇದೀಗ ರಾಜಕೀಯದಿಂದಲೂ ದೂರವೇ ಇದ್ಧಾರೆ. ಆದರೆ ರಮ್ಯಾ ಕಟ್ಟಾ ಕಾಂಗ್ರೆಸ್ ಬೆಂಬಲಿಗರು ಎನ್ನುವುದು ಗೊತ್ತಿದೆ.. ಬಿಜೆಪಿ , ಮೋದಿ ಅವರನ್ನ ಸದಾ ಕಾಲ ವಿರೋಧಿಸುತ್ತಾ , ರಾಹುಲ್ ಗಾಂಧಿ ಅವರ ಸೈದ್ಧಾಂತಗಳನ್ನ ಬೆಂಬಲಿಸುತ್ತಾ ಬಂದಿದ್ದಾರೆ.

Ad Widget . Ad Widget .

ಆದರೆ ಈಗ ಕಹಾನಿಮೇ ಟ್ವಿಸ್ಟ್ ಎಂಬಂತೆ ರಮ್ಯಾ ಬಿಜೆಪಿ ಸೇರಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ದು , ಈ ವದಂತಿಯನ್ನೂ ಸಹ ಅಭಿಮಾನಿಗಳಿಂದ ಅರಗಿಸಿಕೊಳ್ಳಲಾಗುತ್ತಿಲ್ಲ

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಬಲವರ್ಧನೆಗೆ ಪ್ರಯತ್ನಿಸುತ್ತಿರುವ ಕಮಲ ನಾಯಕರು ಇದೀಗ ರಮ್ಯಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ತಂತ್ರಗಾರಿಕೆಯಲ್ಲಿದ್ದಾರೆ ಎನ್ನಲಾಗ್ತಿದೆ.

ಆದರೆ ಈ ಬಗ್ಗೆ ರಮ್ಯಾ ಅವರ ಯೋಚನೆ ಏನು..? ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ? ರಮ್ಯಾ ನಿಜಕ್ಕೂ ಬಿಜೆಪಿ ಸೇರುತ್ತಾರಾ? ಅನ್ನೋದಕ್ಕೆ ನಿಖರ ಉತ್ತರಗಳು ಇಲ್ಲ.. ಮುಂದಿನ ದಿನಗಳಲ್ಲಿ ಯಾವೆಲ್ಲಾ ಬೆಳಗಣಿಗಳಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ರಾಜಕಾರಣದಲ್ಲಿ ಯಾವುದೂ ಅಸಾಧ್ಯವೂ ಅಲ್ಲ. ಟ್ವಿಸ್ಟ್ ಗಳಿಗೂ ಕೊರೆತೆಯೇನಿಲ್ಲ.. ಯಾವಾಗ ಯಾವ ರೀತಿಯಾದ ಬದಲಾವಣೆಗಳು ಆಗುತ್ತವೆ ಎಂದು ಊಹೆ ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ.‌ ಇನ್ನು ರಮ್ಯಾ ಮೇಡಂ ಈ ಬೆಳವಣಿಗೆ ಬಗ್ಗೆ ಏನು ಪ್ರತಿಕ್ರಿಯೆ ನೀಡ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

Leave a Comment

Your email address will not be published. Required fields are marked *