ಸಮಗ್ರ ನ್ಯೂಸ್: ರಸ್ತೆ ಇಲ್ಲದೆ ವೃದ್ಧೆಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಂಬಂಧಿಕರು ಜೋಳಿಗೆಯಲ್ಲಿ ಹೊತ್ತೊಯ್ದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ನಡೆದಿದೆ.
ವೃದ್ಧೆ ವೆಂಕಮ್ಮ(85) ಇವರು ಅನಾರೋಗ್ಯಕ್ಕೆ ಒಳಗಾದವರು. ಇವರು ಮನೆ ರಸ್ತೆ ಇಲ್ಲದೆ ತಮ್ಮ ಕೆಲಸ ಕಾರ್ಯಗಳಿಗೆ ಕಾಲು ದಾರಿಯಲ್ಲಿ ಓಡಾಡುತ್ತಿದ್ದ ಆದಿವಾಸಿ ಕುಟುಂಬವಾಗಿದೆ. ಇದೀಗ ಇವರಿಗೆ ಅನಾರೋಗ್ಯ ಉಂಟಾಗಿದ್ದು ಆಸ್ಪತ್ರೆಗೆ ಸಾಗಿಸಲು ವಾಹನ ಬಾರದೆ ಮನೆಯಿಂದ ಜಮೀನಿನ ಕಾಲು ದಾರಿಯಲ್ಲಿ
ಸಂಬಂಧಿಕರು ಜೋಳಿಗೆಯಲ್ಲಿ ಹೊತ್ತೊಯ್ದಿದ್ದಾರೆ.
2021ರಲ್ಲಿಯೇ ರಸ್ತೆ ಇಲ್ಲ ರಸ್ತೆ ಮಾಡಿಸಿಕೊಡಿ ಎಂದು ಸಚಿವ ಆರ್ ಆಶೋಕ್, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ ಇವರ ಮನವಿಗೆ ಯಾವುದೇ ಸ್ಪಂದನೆ ಮಾಡದೇ ಇರುವುದರಿಂದ ಸರ್ಕಾರ, ಜಿಲ್ಲಾಡಳಿತ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.