Ad Widget .

ನಕಲಿ ವೆಬ್ ಸೈಟ್ ತೆರೆದು ವಂಚನೆ; 3ಮಂದಿಯ ಬಂಧನ

ಬೆಂಗಳೂರು: ವಿಆರ್‌ಎಲ್‌ ಮೂವರ್ಸ್ ಅಂಡ್‌ ಪ್ಯಾಕರ್ಸ್‌ ಎಂಬ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಓಪನ್ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಬಿಹಾರ ಮೂಲಕ 3ಮಂದಿ ಆರೋಪಿಗಳನ್ನು ಈಶಾನ್ಯ ವಿಭಾಗದ ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಯಶವಂತಪುರದಲ್ಲಿ ನೆಲೆಸಿದ್ದ ಬ್ರಹ್ಮದೇವ್‌ ಯಾದವ್‌ (25), ಮುಕೇಶ್‌ ಕುಮಾರ್‌ ಯಾದವ್‌, ವಿಜಯ್‌ ಕುಮಾರ್‌ ಯಾದವ್‌ (22) ಬಂಧಿತರು.

Ad Widget . Ad Widget .

ನಗರದಿಂದ ಹಲವು ಕಡೆಗೆ ದ್ವಿಚಕ್ರ ವಾಹನ ಕಳುಹಿಸಲು ಗೂಗಲ್‌ಗೆ ಹೋಗಿ ಪ್ಯಾಕರ್ಸ್‌ ಅಂಡ್‌ ಮೂವರ್ಸ್‌ ಎಂದು ನಮೂದಿಸಿದರೆ ವಿಆರ್‌ಎಲ್‌ ಮೂವರ್ಸ್‌ ಅಂಡ್‌ ಪ್ಯಾಕರ್ಸ್‌ ಎಂಬ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರೆದುಕೊಳ್ಳುತ್ತಿತ್ತು.

ಇದನ್ನೇ ನಂಬಿದ ಗ್ರಾಹಕ ಕರೆ ಮಾಡಿ ವಿಚಾರಿಸಿದಾಗ, ಖಾತೆಗೆ ₹ 1 ಸಾವಿರ ಹಾಕಲು ಆರೋಪಿಗಳು ಹೇಳಿದ್ದರು. ಮರುದಿನ ಇಬ್ಬರೂ ಬಂದು ದ್ವಿಚಕ್ರ ವಾಹನವನ್ನು ಪ್ಯಾಕ್‌ ಮಾಡಿ, ಕೊಂಡೊಯ್ದಿದ್ದರು. ಅದಾದ ಮೇಲೆ ₹ 8 ಸಾವಿರ ನೀಡಿದರೆ ಬೈಕ್‌ ನೀಡುವುದಾಗಿ ಬೆದರಿಕೆ ಒಡ್ಡಿದ್ದರು’ ಎಂದು ಪೊಲೀಸ್‌ ಮಾಹಿತಿ ತಿಳಿಸಿವೆ.

‘ಬೇರೆ ಬೇರೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರೆದು 3ಮಂದಿ ವಂಚಿಸುತ್ತಿದ್ದರು. ಮೊದಲು ಕಡಿಮೆ ಹಣ ಪಡೆದು, ವಾಹನ ಸಿಕ್ಕಿದ ಮೇಲೆ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದ್ದರು. ಒಂದು ಬೈಕ್‌, ನಾಲ್ಕು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ’ ಎಂಬ ಮಾಹಿತಿ ದೊರಕಿವೆ.

Leave a Comment

Your email address will not be published. Required fields are marked *