Ad Widget .

60 ವರ್ಷದ ವ್ಯಕ್ತಿಯ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದ 55 ವರ್ಷದ ಮಹಿಳೆ..!!

ಆಂಧ್ರಪ್ರದೇಶ: ಮಧ್ಯ ವಯಸ್ಕ ಮಹಿಳೆ, ತನ್ನ ಮಧ್ಯ ವಯಸ್ಕ ಪ್ರಿಯತಮನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಘಟನೆ ಆಂಧ್ರದಲ್ಲಿ ನಡೆದಿದೆ.

Ad Widget . Ad Widget .

ನಡೆದ ಘಟನೆ ಏನು?
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಂಡಪಿ ಮಂಗಲದ ಮುಂಗಚೇತಲ ಎಂಬಲ್ಲಿ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನು ಆತನ 55 ವರ್ಷದ ಪ್ರಿಯತಮೆ ಕತ್ತರಿಸಿ ಹಾಕಿದ್ದಾಳೆ ಎಂಬ ಬಗ್ಗೆ ವರದಿಯಾಗಿದೆ. ಈ ಇಬ್ಬರ ನಡುವೆ 10 ವರ್ಷಗಳಿಂದ ಅಕ್ರಮ ಸಂಬಂಧ ಇತ್ತು ಎನ್ನವಾಗಿದೆ.

Ad Widget . Ad Widget .

ಭೇಟಿಗೆ ಅಂತ ಕರೆಸಿ ಪ್ರಿಯಕರನ ಮರ್ಮಾಂಗಕ್ಕೆ ಕತ್ತರಿ.
ಆ ಮಹಿಳೆ ಹಾಗೂ ಪುರುಷನ ನಡುವೆ ಯಾವುದೇ ಕಾರಣಕ್ಕೆ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದ ಆಕೆ, ಸಂಜೆ ತನ್ನನ್ನು ಬಂದು ಭೇಟಿಯಾಗುವಂತೆ ತಿಳಿಸಿದ್ದಾಳೆ. ಅದರಂತೆ ಆತ ಆಕೆಯ ಮನೆಗೆ ಹೋದಾಗ ಇಬ್ಬರಿಗೂ ಜಗಳ ನಡೆದು, ವಿಪರೀತಕ್ಕೆ ಹೋಗಿದೆ. ಕೊನೆಗೆ ಆಕೆ ಹೊಸ ಬ್ಲೇಡ್‌ನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ ಎನ್ನಲಾಗಿದೆ.


ಇದೀಗ ಮರ್ಮಾಂಗ ಕಳೆದುಕೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ ಅಂತ ಹೇಳಲಾಗುತ್ತಿದೆ. ಇನ್ನು ಆರೋಪಿ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *