Ad Widget .

ಕೆಎಸ್ಆರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ವ್ಯಕ್ತಿ  ಮೃತ್ಯು

ಸಮಗ್ರ ನ್ಯೂಸ್ : ಮೂರು ದಿನಗಳ ಹಿಂದೆ ಕೆಎಸ್‌ಆರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೆದುವಾರು ನಿವಾಸಿ ಇನಾಸ್ ಡಿ ಸೋಜಾ ಎಂದು ಗುರುತಿಸಲಾಗಿದೆ.

Ad Widget . Ad Widget .

ಇವರು ಸೆಪ್ಟೆಂಬರ್ 15 ರಂದು ವಿಟ್ಲ ಪೇಟೆಯಿಂದ ಆಗತ್ಯ ಕೆಲಸ ಮುಗಿಸಿ ವಿಟ್ಲ ಪಕಳಕುಂಜ ಕೆ.ಎಸ್.ಆರ್.ಟಿ.ಸಿ ಬಸ್ಸಲ್ಲಿ ವಿಟ್ಲದಿಂದ ಹೊರಟು ಕೆದುವಾರು ಎಂಬಲ್ಲಿಗೆ ಪ್ರಯಾಣಿಸುತ್ತಿದ್ದರು.

Ad Widget . Ad Widget .

ಬಸ್ ಸ್ಟಾಪ್‌ನಲ್ಲಿ ಇಳಿಯಲು ಎದ್ದು ನಿಂತಾಗ ಚಾಲಕ ತಿರುವು ರಸ್ತೆಯಲ್ಲಿ ಒಮ್ಮೆಲೇ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿದ್ದರಿಂದ ಬಸ್ಸಿನ ಹಿಂಬದಿಯ ಬಾಗಿಲಿನಿಂದ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಇನಾಸ್ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿತ್ತು.

ಹೀಗಾಗಿ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ ಸಾವನ್ನಪ್ಪಿದರು.

Leave a Comment

Your email address will not be published. Required fields are marked *