ಸಮಗ್ರ ನ್ಯೂಸ್: ಸುಳ್ಯ ತಾಲೂಕು ನಾಗಪಟ್ಟಣಕ್ಕೆ ಹೋಗುವ ರಸ್ತೆ ಕಲ್ಲು ಮುಟ್ಟಲು ಬಸ್ ಸ್ಟಾಂಡಿನ ಎದುರುಗಡೆ ವಿದ್ಯುತ್ ಟ್ರಾನ್ಸ್ಫರ್ ಕಂಬ, ಎಚ್ ಪಿ ಲೈನಿನ ಕಂಬಕ್ಕೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ.


ಈ ಕಾರಣ ಲೈನಿನ ತಂತಿ ಮೇಲೆ ಮರ – ಗಿಡಗಳು ಟಚ್ ಆಗುತ್ತಿದ್ದು, ಇದರಿಂದ ಶಾಲೆ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಅಪಾಯಕಾರಿಯಾಗಿದೆ. ಹಾಗಾಗಿ ಈ ಕಾಡನ್ನು ಸ್ವಚ್ಛ ಮಾಡಬೇಕಾಗಿದೆ.

ಒಂದು ವೇಳೆ ಈ ಕಾಡನ್ನು ಸ್ವಚ್ಛ ಮಾಡದಿದ್ದಲ್ಲಿ ಸುಳ್ಯ ಮೆಸ್ಕಾಂ ಇಲಾಖೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಮಾಧ್ಯಮದ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇನೆ.
ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ
ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ತಿಳಿಸಿದ್ದಾರೆ.