Ad Widget .

ಕಡಲ ತೀರದ ಸ್ವಚ್ಚತೆ ನಮ್ಮೆಲ್ಲರ ಹೊಣೆಗಾರಿಕೆ –ಡಾ ಚೂಂತಾರು/ಉಳ್ಳಾಲ ಗ್ರಹ ರಕ್ಷಕರಿಂದ ಸ್ವಚ್ಛ ಕಡಲು ಸ್ವಚ್ಛ ಸಾಗರ ಅಭಿಯಾನ

Ad Widget . Ad Widget .

ಸಮಗ್ರ ನ್ಯೂಸ್: ಕಡಲ ತೀರದ ಸ್ವಚ್ಚತೆ ಕೇವಲ ಜಿಲ್ಲಾಡಳಿತದ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬ ಪ್ರಜೆಯೂ ಇದರಲ್ಲಿ ಪಾಲ್ಗೊಳ್ಳಬೇಕು. ಕಡಲ ತೀರದ ತ್ರಾಜ್ಯ ನಿರ್ವಹಣೆಯಲ್ಲಿ ಪ್ರತಿ ಪ್ರಜೆಯೂ ಕೈ ಜೋಡಿಸಬೇಕು.ಪ್ರವಾಸಿಗರೂ ಇದರಲ್ಲಿ ಸಹಕರಿಸಬೇಕು.

Ad Widget . Ad Widget .

ಹಾಗಾದರೆ ಮಾತ್ರ ಕಡಲ ತೀರ ಸ್ವಚ್ಚವಾಗಬಹುದು ಎಂದು ದ ಕ ಜಿಲ್ಲಾ ಗ್ರಹ ರಕ್ಷಕ ದಳದ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು. ದಿನಾಂಕ ೧೮/೦೯/೨೦೨೨ ನೇ ಭಾನುವಾರ ಸೋಮೇಶ್ವರ ಕಡಲ ತೀರದಲ್ಲಿ ಉಳ್ಳಾಲ ಗ್ರಹ ರಕ್ಷಕ ದಳದ ವತಿಯಿಂದ ಸ್ವಚ್ಚ ಕಡಲು ಸ್ವಚ್ಚ ಸಾಗರ ಅಭಿಯಾನ ಜರುಗಿತು.

ಉಳ್ಳಾಲ ಘಟಕದ ಹಿರಿಯ ಗ್ರಹ ರಕ್ಷಕರಾಗಿ ಶ್ರೀ ಸುನಿಲ್, ಹಮೀದ್ ಪಾವಳ, ದಿವ್ಯಾ ಪೂಜಾರಿ, ಧನಂಜಯ್, ಪ್ರಸಾದ್ ಸುವರ್ಣ, ಅಬ್ದುಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು ೧೦೦ ಕೆಜಿ ಗಿಂತಲೂ ಅಧಿಕ ತ್ಯಾಜ್ಯ ಸಂಗ್ರಹಣ ಮಾಡಲಾಯಿತು. ಸುಮಾರು ೨೦ ಗ್ರಹ ರಕ್ಷಕ ರು ಈ ಅಭಿಯಾನ ದಲ್ಲಿ ಪಾಲು ಗೊಂಡರು.

Leave a Comment

Your email address will not be published. Required fields are marked *