ಸಮಗ್ರ ನ್ಯೂಸ್ : ವಿಶ್ವದ ಮೊದಲ ಹಾರುವ ಬೈಕ್ ತಯಾರಾಗಿ ಹೊಸ ಮಾಡೆಲ್ ಬೈಕ್ ಬಂದಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಜಪಾನ್ ಮೂಲದ ಸ್ಟಾಟಪ್ ಕಂಪನಿ ಏರ್‌ವಿನ್ಸ್ ಟೆಕ್ನಾಲಜೀಸ್ ಅಮೆರಿಕದ ಡೆಟ್ರಾಯಿಟ್‌ನಲ್ಲಿ ನಡೆಯುತ್ತಿರುವ ಆಟೋ ಶೋನಲ್ಲಿ ಈ ಬೈಕನ್ನು ಪ್ರದರ್ಶನ ಮಾಡಿದೆ.
ಇದು ಸಂಪೂರ್ಣವಾಗಿ ಬ್ಯಾಟರಿ ಚಾಲಿತವಾಗಿದ್ದು, ವ್ಯಕ್ತಿಯೊಬ್ಬರು ಕುಳಿತುಕೊಂಡು ಹಾರಾಟ ಮಾಡಬಹುದು. ಈ ಬೈಕ್ 40 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಬಲ್ಲದು ಅಂತ ತಯಾರಿಸಿದ ಕಂಪನಿ ಹೇಳಿಕೊಂಡಿದೆ.
ಹಾರುವ ಬೈಕ್ ಗಂಟೆಗೆ 60 ಮೈಲುಗಳ ವೇಗದಲ್ಲಿ ಅಂದರೆ ಸುಮಾರು 100 ಕಿ.ಮೀಟರ್ ವೇಗದಲ್ಲಿ ಹಾರುತ್ತದೆ ಅಂತ ಹೇಳಲಾಗಿದೆ.
ಈ ಬೈಕ್ ತೂಕವನ್ನು ಕಡಿಮೆ ಮಾಡೋಕೆ ಅಂತ ಇದನ್ನು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಇದರಿಂದ ಚಾಲಕನ ತೂಕವನ್ನು ಬ್ಯಾಲೆನ್ಸ್ ಮಾಡಿ ಬೈಕ್ ಹಾರಿಸೋಕೆ ಸಹಾಯ ಆಗುತ್ತದೆಂದು ಕಂಪನಿ ತಿಳಿಸಿದೆ.
ಮುಂದಿನ ವರ್ಷವೇ ಇದು ಮಾರುಕಟ್ಟೆಗೆ ಲಗ್ಗೆ ಇಡಬಹುದು ಅಂತ ಹೇಳಲಾಗಿದ್ದು ಇದರ ಅಂದಾಜು ಬೆಲೆ 77,700 ಡಾಲರ್ ಅಂದರೆ 6 ಕೋಟಿ ರೂ.ಗೂ ಅಧಿಕ ಹಣ ಹೇಳಬಹುದು.