ಸಮಗ್ರ ನ್ಯೂಸ್: ದೇವಸ್ಥಾನದಲ್ಲಿ ‘ಫ್ಯಾಷನ್ ಶೋ’ ಆಯೋಜಿಸಿದ್ದನ್ನು ಭಜರಂಗ ದಳದ ಕಾರ್ಯಕರ್ತರು ಆಕ್ಷೇಪಿಸಿರುವ ಘಟನೆ ಛತ್ತೀಸ್ ಗಢ ರಾಜ್ಯದ ರಾಯ್ಪುರದ ಬಾಲಾಜಿ ದೇವಸ್ಥಾನದಲ್ಲಿ ನಡೆದಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಭಜರಂಗ ದಳ ಹೇಳಿದೆ.
ಟೆಲಿಬಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲಸರ್ ದೇವಸ್ಥಾನದಲ್ಲಿ ಭಾನುವಾರ ಎಫ್‌ಡಿಸಿಎ ಹೆಸರಿನ ಕಂಪನಿಯು ‘ಫ್ಯಾಷನ್ ಶೋ’ ಆಯೋಜಿಸಿದೆ. ಆರಿಫ್ ಮತ್ತು ಮನೀಶ್ ಸೋನಿ ಎಂಬುವವರೇ ಈ ‘ಫ್ಯಾಶನ್ ಶೋ’ದ ಆಯೋಜಕರು ಎಂದು ವರದಿಯಾಗಿದೆ.
ಧಾರ್ಮಿಕ ತಾಣವಾದ ಸಾಲಸರ್ ದೇವಸ್ಥಾನದಲ್ಲಿ ‘ಫ್ಯಾಷನ್ ಶೋ’ ನಡೆಯುವ ವೇಳೆ ಸ್ಥಳಕ್ಕೆ ಭಜರಂಗ ದಳದ ಮುಖಂಡರು ಆಗಮಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆ ಆಕ್ಷೇಪಿಸಿದ್ದಾರೆ. ನಂತರ ಹಿಂದುಪರ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಿಜಾಬ್ ಧರಿಸಿದ ಮಹಿಳೆ ಸಹ ಇದ್ದು, ಕಾರ್ಯಕರ್ತರು ಕಾರ್ಯಕ್ರಮ ಸಂಘಟಕರ ಜತೆಗಿನ ವಾಗ್ದಾದ ನಡೆಸಿರುವುದು ಕಂಡುಬಂದಿದೆ.