ಸುಳ್ಯ: ಮಾಜಿ ಸಚಿವ ರಮಾನಾಥ ರೈ ಹುಟ್ಟುಹಬ್ಬ ಆಚರಣೆ ವೇಳೆ ಕಳ್ಳತನ| ಕಿಸೆಯಲ್ಲಿದ್ದ 50 ಸಾವಿರ ಕಳ್ಳರ ಪಾಲು

ಸಮಗ್ರ ನ್ಯೂಸ್: ಮಾಜಿ ಸಚಿವ ರಮಾನಾಥ ರೈಯವರ ಹುಟ್ಟು ಹಬ್ಬದ ಪ್ರಯುಕ್ತ ಪೆರ್ನೆಯಲ್ಲಿ ನಡೆದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೆಳ್ಳಾರೆ ಸಿಎ ಬ್ಯಾಂಕ್ ಅನಿಲ್ ರೈ ಚಾವಡಿಬಾಗಿಲು ಅಧ್ಯಕ್ಷರ ಕಿಸೆಯಲ್ಲಿದ್ದ 50 ಸಾವಿರ ರೂ ಗಳ ಕಟ್ಟನ್ನು ಕಿಸೆಗಳ್ಳರು ಎಗರಿಸಿದ್ದಾರೆ.

Ad Widget ... ..

ಬೆಳ್ಳಾರೆ ಪ್ರಾ.ಕೃ.ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಅವರು ತಾನು ಅಡಿಕೆ ಮಾರಾಟ ಮಾಡಿದ 50 ಸಾವಿರ ರೂ.ಗಳನ್ನು ಪ್ಯಾಂಟಿನ ಎಡಬದಿಯ ಕಿಸೆಯೊಳಗೆ ಇಟ್ಟುಕೊಂಡಿದ್ದರು. ರಮಾನಾಥ ರೈಯವರಿಗೆ ಮಾಲಾರ್ಪಣೆ ವೇಳೆ ಒಮ್ಮೆಲೆ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ನನ್ನ ಕಿಸೆಯಲ್ಲಿದ್ದ 50 ಸಾವಿರ ರೂ.ಗಳ ಕಟ್ಟು ನಾಪತ್ತೆಯಾಗಿದೆ ಎನ್ನಲಾಗಿದೆ.

Ad Widget

ಘಟನೆಯ ಕುರಿತು ಪರಿಶೀಲಿಸಲು ಸಿಸಿ ಕ್ಯಾಮರಾ ಕೂಡಾ ಅಲ್ಲಿರಲಿಲ್ಲ. ಹೀಗಾಗಿ ರಮಾನಾಥ ರೈಯವರ ಬರ್ತ್ ಡೇ ಪಾರ್ಟಿಯನ್ನು ಕಳ್ಳರು ಗೌಜಿಯಿಂದಲೇ ಆಚರಿಸಿರುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *