Ad Widget .

ಮುಲ್ಕಿ: ಅನ್ಯಕೋಮಿನ ಯುವಕನ ಜೊತೆ ಪತ್ತೆಯಾದ ಹಿಂದೂ ಯುವತಿ| ಯುವಕ ಬಂಧನ; ಯುವತಿ ಪರಾರಿ

ಸಮಗ್ರ ನ್ಯೂಸ್: ಅನ್ಯ ಕೋಮಿನ ಯುವಕನೋರ್ವನ ಜೊತೆ ಯುವತಿಯೋರ್ವಳು ಪತ್ತೆಯಾಗಿದ್ದು, ಯುವಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ನಡೆದಿದೆ. ಸ್ಥಳೀಯ ಯುವಕರ ಕಾರ್ಯಾಚರಣೆಯಿಂದ ಅನ್ಯಕೋಮಿನ ಯುವಕನ ಬಂಧನವಾಗಿದೆ. ಈ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ ನಗರ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದಿದೆ. ಫಯಿಮ್ ಎಂಬಾತನೇ ಬಂಧಿತ ವ್ಯಕ್ತಿ.

Ad Widget . Ad Widget .

ಉಡುಪಿಯ ಕಟಪಾಡಿಯಲ್ಲಿ ವಾಸ್ತವ್ಯವಿರುವ ಉತ್ತರ ಪ್ರದೇಶ ಮೂಲದ ಈತ ಕಟಪಾಡಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸಕ್ಕಿದ್ದು ತನ್ನ ಮಿತ್ರ ಗುಲ್ಬಾಮ್ ಎಂಬವರ ರೂಮ್‌ಗೆ ಬಂದಿದ್ದ. ಆ ಸಂದರ್ಭ ಕೊಲಕಾಡಿ ಮೂಲದ ಯುವತಿ ಜೊತೆ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸ್ಥಳೀಯರಿಗೆ ಸಂಶಯ ಬಂದು ವಿಚಾರಿಸಿದ್ದು, ಕೂಡಲೇ ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ.

Ad Widget . Ad Widget .

ಈ ಸಂದರ್ಭ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದ್ದು, ಸ್ಥಳೀಯರು ಆರೋಪಿಗೆ ಹಲ್ಲೆ ಮಾಡಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇಬ್ಬರು ಮಕ್ಕಳ ತಂದೆಯಾಗಿರುವ ಆರೋಪಿ ಫಯೀಮ್ ಕಟಪಾಡಿಯಲ್ಲಿ ನೆಲೆಸಿದ್ದು , ಕಳೆದ ಕೆಲ ತಿಂಗಳ ಹಿಂದೆ ಈತ ಕಾರ್ನಾಡುವಿನಲ್ಲಿ ಸೆಲೂನ್ ಅಂಗಡಿ ನಡೆಸುತ್ತಿದ್ದು ಬದಿಯಲ್ಲಿದ್ದ ಫ್ಯಾನ್ಸಿ ಸೆಂಟರ್ ನಲ್ಲಿ ಇದೇ ಯುವತಿ ಕೆಲಸ ಮಾಡುತ್ತಿರುವಾಗ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಈ ಘಟನೆಯಿಂದ ಮುಲ್ಕಿ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಠಾಣೆಯ ಹೊರಬದಿಯಲ್ಲಿ ಸಂಘಟನೆಯ ನಾಯಕರು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Leave a Comment

Your email address will not be published. Required fields are marked *