ಮಂಗಳೂರು: ಫಾಝಿಲ್ ಹತ್ಯೆ ಪ್ರಕರಣ| ಆರೋಪಿ‌ ಹರ್ಷಿತ್ ಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಬಂಟ್ವಾಳದ ಹರ್ಷಿತ್‌ಗೆ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ನೀಡಿದೆ.

Ad Widget ... ..

ಜುಲೈ .28ರಂದು ರಾತ್ರಿ ಸುರತ್ಕಲ್ ಅಂಗಡಿಯೊಂದರ ಮುಂಭಾಗದಲ್ಲಿ ಫಾಝಿಲ್‌ನನ್ನು ತಂಡವೊಂದು ಕೊಲೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Ad Widget

ಈ ನಡುವೆ ಇದೀಗ ಆರೋಪಿ ಹರ್ಷಿತ್‌ಗೆ ನ್ಯಾಯಾಲಯವು ಸೆ.7ರಂದು ಜಾಮೀನು ಮಂಜೂರು ಮಾಡಿದೆ. ಜುಲೈ 28ರಂದು ರಾತ್ರಿ ಮುಹಮ್ಮದ್ ಫಾಝಿಲ್ ಅವರು ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಭೇಟಿ ಮಾಡಿ ಅಂಗಡಿಯಿಂದ ಹೊರ‌ಬರುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿತ್ತು.

Leave a Comment

Your email address will not be published. Required fields are marked *