Ad Widget .

ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ ರೆಜಿನಾಗೆ ಈ ತೆಲುಗು ನಟ ಕೊಟ್ಟ ಉತ್ತರ ಇನ್ನೂ ಭಯಂಕರ!!

ಸಮಗ್ರ‌ ನ್ಯೂಸ್: ಕನ್ನಡದ ಸೂರ್ಯಕಾಂತಿ ಸೇರಿದಂತೆ ಹಲವು ಸಿನಿಮಾಗಳನ್ನು ಮಾಡಿರುವ ನಟಿ ರೆಜಿನಾ ಮೊನ್ನೆಯಷ್ಟೇ ತಮ್ಮ ಸಿನಿಮಾದ ಪ್ರಚಾರದಲ್ಲಿ ಪೋಲಿ ತಮಾಷೆ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೆಜಿನಾ ‘ ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷದಲ್ಲೇ ಮುಗಿಯತ್ತೆ’ ಎಂದು ಹೇಳಿದ್ದರು. ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅದರಲ್ಲೂ ಪಡ್ಡೆಗಳು ಈ ವಿಡಿಯೋವನ್ನು ಟ್ರೋಲ್ ಕೂಡ ಮಾಡಿದ್ದರು.

Ad Widget . Ad Widget .

ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತೆಲುಗು ನಟ ಅಡಿವಿ ಶೇಷ್ ಪ್ರತ್ಯುತ್ತರ ಕೊಟ್ಟಿದ್ದು, ಅದು ಇನ್ನೂ ಅಚ್ಚರಿ ಮೂಡಿಸುವಂತಿದೆ. ಹುಡುಗರ ಸಾಮರ್ಥ್ಯವನ್ನು 2 ನಿಮಿಷದಲ್ಲೇ ಮುಗಿಯುವ ಮ್ಯಾಗಿಗೆ ರೆಜಿನಾ ಹೋಲಿಸಿದರೆ, ಅಡಿವಿ ಶೇಷ್ ‘ನನಗೆ ಸ್ಟೆಮಿನಾ ಜಾಸ್ತಿ’ ಎಂದು ಹೇಳಿದ್ದಾರೆ. ಇವರ ಮಾತು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ. ಅಲ್ಲದೇ, ರೆಜಿನಾಗೆ ಟ್ಯಾಗ್ ಮಾಡುವ ಮೂಲಕ ಟ್ರೋಲ್ ಮಾಡಲಾಗುತ್ತಿದೆ.

Ad Widget . Ad Widget .

ರೆಜಿನಾ ನಟನೆಯ ಶಾಕಿನಿ ಡಾಕಿನಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಚಾರವನ್ನು ಕೋ ಸ್ಟಾರ್ ಜೊತೆ ನಡೆಸಿದ್ದಾರೆ ನಟಿ. ಈ ಸಂದರ್ಭದಲ್ಲಿ ಹಲವು ಟಿವಿ ಸಂದರ್ಶನಗಳಲ್ಲೂ ರೆಜಿನಾ ಮಾತನಾಡಿದ್ದಾರೆ. ಆಗ ನಿರೂಪಕ ‘ 2 ನಿಮಿಷದಲ್ಲಿ ಮ್ಯಾಗಿ ರೆಡಿ ಆಗತ್ತೆ, ಹುಡುಗಿಯರ ಮೇಕಪ್ ಮುಗಿಯಲ್ಲ’ ಎಂದು ಹೇಳುತ್ತಾರೆ. ತಕ್ಷಣವೇ ರೆಜಿನಾ ಕೂಡ ಮ್ಯಾಗಿ ಬಗ್ಗೆ ನನ್ನ ಹತ್ತಿರವೂ ಒಂದು ಜೋಕ್ ಇದೆ ಎಂದು ಹೇಳುತ್ತಾ, ‘ಮ್ಯಾಗಿಗೆ ಹುಡುಗರ ಸಾಮರ್ಥ್ಯವನ್ನು ಹೋಲಿಕೆ ಮಾಡಿ ಹೇಳುತ್ತಾರೆ.

Leave a Comment

Your email address will not be published. Required fields are marked *