Ad Widget .

ಜಾಲ್ಸೂರು-ಸುಬ್ರಹ್ಮಣ್ಯ ಹೆದ್ದಾರಿ ಬದಿಯ ಅಪಾಯಕಾರಿ ಮರಗಳ ತೆರವು

ಸಮಗ್ರ ನ್ಯೂಸ್: ಜಾಲ್ಸೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಡುಗಲ್ಲು ಕಲ್ಲಾಜೆ ಸಮಿಪ ಗುಡ್ಡ‌ ಕುಸಿತದ ಪರಿಣಾಮ ಕೆಲವು ಬೃಹತ್ ಮರಗಳು ರಸ್ತೆಗೆ ವಾಲಿನಿಂತಿದ್ದು ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ಕುರಿತು ಸಮಗ್ರ ಸಮಾಚಾರ ವರದಿ‌ ಬೆನ್ನಲ್ಲೇ ಮರಗಳನ್ನು ತೆರವು ಮಾಡಲಾಗಿದೆ.

Ad Widget . Ad Widget .

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂ ಸೇವಕರು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಇಂದು ತೆರವು ಮಾಡಿದರು. ಅರಣ್ಯ ಇಲಾಖೆಯ ನಾಲ್ಕೂರು ವಿಭಾಗದ ಅರಣ್ಯಾಧಿಕಾರಿ ಸದಾಶಿವ, ಅರಣ್ಯ ರಕ್ಷಕ ಅಶೋಕ್ ಇವರ ಜೊತೆಗೆ ಶೌರ್ಯ ತಂಡದ ಚಂದ್ರಶೇಖರ್, ಲೋಹಿತ್, ಕರುಣಾಕರ್, ಹರಿಪ್ರಸಾದ್, ಪ್ರಜ್ವಲ್, ಕಾರ್ತಿಕ್, ದೀಪಕ್, ಶೇಷಪ್ಪ ನಾಯ್ಕ್ ಮತ್ತು ವಿನೂಪ್ ಮತ್ತಿತರರು ಸಹಕರಿಸಿದರು.

Ad Widget . Ad Widget .

Leave a Comment

Your email address will not be published. Required fields are marked *